vk-logo ನಮ್ಮ ಬಗ್ಗೆ

’ವಿಶ್ವಕನ್ನಡಿಗರು’ ವೇದಿಕೆಯು ಜಗತ್ತಿನಾದ್ಯಂತ ನೆಲೆಸಿರುವ ಎಲ್ಲ ಕನ್ನಡಿಗರನ್ನು ಒಂದೇ ಸೂರಿನೂಡಿ ಒಗ್ಗೂಡಿಸುವ ಗುರಿಯನ್ನು ಹೊಂದಿದ್ದು, ಇದು ಶಾಶ್ವತವಾದ ಏಕತೆಯ ಅನುಬಂಧವನ್ನು ಮೂಡಿಸುತ್ತದೆ. ಇದು ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರ ಧ್ವನಿಯನ್ನು ಪ್ರತಿನಿಧಿಸುವ ಉದ್ದೇಶವನ್ನು ಹೊಂದಿದ್ದು, ಸಾರ್ವತ್ರಿಕ ಏಕತೆಯ ಮನೋಭಾವನೆಯನ್ನು ಉತ್ತೇಜಿಸುತ್ತದೆ.

ಇಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುವುದರ ಮೂಲಕ ಕನ್ನಡ ಸಂಸ್ಕೃತಿಯ ಸಾಂಪ್ರದಾಯಿಕ ಅಸ್ಮಿತೆಗಳನ್ನು ನಮ್ಮ ಮುಂದಿನ ತಲೆಮಾರಿಗೆ ತಲುಪಿಸುತ್ತಾ, ಸಾರ್ವಕಾಲಿಕವಾಗಿ ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ನಮ್ಮ ಶ್ರೇಷ್ಠ ಪ್ರಯಾಣವನ್ನು ಪ್ರಾರಂಭಿಸೋಣ. ಒಂದು ಅಚಲ ದೃಷ್ಟಿಯೊಂದಿಗೆ, ನಮ್ಮ ಸಂಘಟಿತ ದನಿಯನ್ನು ಕರ್ನಾಟಕದ ನೆಲದಲ್ಲಿ ಸಾಕಾರಗೊಳಿಸುತ್ತಾ, ಎಲ್ಲ ಕನ್ನಡಿಗರ ಶ್ರೇಯೋಭಿಲಾಷೆಗೆ ದುಡಿಯೋಣ.

ಆತ್ಮೀಯ ವಂದನೆಗಳೊಂದಿಗೆ,
ವಿಶ್ವ ಕನ್ನಡಿಗರು