ಗೌಪ್ಯತೆಯ ನೀತಿ
ನಮ್ಮ vishwakannadigaru.com ನಲ್ಲಿ ನಾವು ನಿಮ್ಮ ಗೌಪ್ಯ ಮಾಹಿತಿಯನ್ನು ಗೌರವಿಸುತ್ತಾ, ನೀವು ನೀಡಿದ ವೈಯಕ್ತಿಕ ಮಾಹಿತಿಗಳನ್ನು ಅತ್ಯಂತ ಸುರಕ್ಷಿತವಾಗಿ ಇಡಲು ಬದ್ಧರಾಗಿರುತ್ತೇವೆ. ನಮ್ಮ ಜಾಲತಾಣವನ್ನು ಸಂಪರ್ಕಿಸಿದಾಗ ನೀವು ನೀಡಿದ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ, ಬಹಿರಂಗಪಡಿಸುತ್ತೇವೆ ಮತ್ತು ರಕ್ಷಿಸುತ್ತೇವೆ ಎಂಬುವುದರ ಸಂಪೂರ್ಣ ಮಾಹಿತಿಯು ಈ ಗೌಪ್ಯತೆಯ ನೀತಿಯಲ್ಲಿ ತಿಳಿಸಿರುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಜಾಲತಾಣವನ್ನು ಬಳಸಲು ನಿಮ್ಮ ಅನುಮತಿಯು ನೀತಿಯಲ್ಲಿ ತಿಳಿಸಲ್ಪಟ್ಟಂತೆ ಅವಶ್ಯಕವಾಗಿರುತ್ತದೆ. ನಮ್ಮ ಜಾಲತಾಣವನ್ನು ಉಪಯೋಗಿಸುವುದರ ಮೂಲಕ ನೀವು ಈ ಗೌಪ್ಯತೆಯ ನೀತಿಯಲ್ಲಿ ತಿಳಿಸಿರುವ ಎಲ್ಲ ನಿಯಮಗಳಿಗೆ ನಿಮ್ಮ ಅನುಮತಿಯನ್ನು ನೀಡಿರುತ್ತೀರಿ.
೧. ನೀವು ಆಯ್ಕೆಮಾಡಿಕೊಂಡಂತೆ ವೈಯಕ್ತಿಕ ಮಾಹಿತಿ ನೀಡುವುದು
ನಮ್ಮ vishwakannadigaru.com ಜಾಲತಾಣಕ್ಕೆ ನೀವು ಸಂಪರ್ಕಿಸಿದಾಗ ನೀವು ನಮ್ಮ ಉದ್ದೇಶವನ್ನು ತಿಳಿದುಕೊಂಡು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬಹುದು. ಇದರಲ್ಲಿ ನಿಮ್ಮ ಖಾತೆಯನ್ನು ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ನೀಡಿದ ಮಾಹಿತಿಗಳಾದ ನಿಮ್ಮ ಪೂರ್ಣ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ವಯಸ್ಸು, ಲಿಂಗ, ವಾಸಿಸುವ ಸ್ಥಳ, ನಗರ, ದೇಶ ಮತ್ತು ಉದ್ಯೋಗ, ಈ ಎಲ್ಲ ವಿಚಾರಗಳು ಸೇರಿಕೊಂಡಿರುತ್ತವೆ. ಉದಾಹರಣೆಗೆ ನಮ್ಮ ತಾಣದಲ್ಲಿ ನೀವು ಪೋಸ್ಟರ್ಗಳನ್ನು, ಕ್ಯಾಲೆಂಡರ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಈ ಎಲ್ಲ ಮಾಹಿತಿಗಳನ್ನು ನೀಡಬೇಕಾಗುತ್ತದೆ.
ಹೆಚ್ಚುವರಿಯಾಗಿ, ನೀವು ನಮ್ಮ ಜಾಲತಾಣದ ನಿರಂತರ ಬಳಕೆ, ಸ್ವಯಂಸೇವಕರಾಗಲು ಇಲ್ಲವೇ ನ್ಯೂಸ್ ಲೆಟರ್ಗಳ ಚಂದಾದಾರರಾಗುವ ಸಮಯದಲ್ಲಿ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗಬಹುದು. ಈ ಒಂದು ಮಾಹಿತಿಯು ನಿಮ್ಮ ಅಗತ್ಯಗಳ ಅನುಸಾರವಾಗಿ ನಮ್ಮ ಸೇವೆಗಳನ್ನು ನೀಡಲು, ಅದನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಲು ಮತ್ತು ನಿಮಗೆ ಹೆಚ್ಚು ಪ್ರಸ್ತುತವಾದ ವಿಚಾರಗಳನ್ನು ತಿಳಿಸಲು ನಮಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಜಾಲತಾಣದ ಪ್ರಯೋಜನವನ್ನು ಇನ್ನಷ್ಟು ನಿರಂತರವಾಗಿಯೂ, ವೇಗವಾಗಿ ನೀಡುವ ಅನುಭವವನ್ನು ಒದಗಿಸುವುದು ಅವಶ್ಯಕವಾಗಿರುತ್ತದೆ.
೨. ಜಾಲತಾಣದ ಮಾಹಿತಿ?
ನೀವು ನಮ್ಮ ಜಾಲತಾಣದ ಮೂಲಕ ಬ್ರೌಸ್ ಮಾಡುವಾಗ, ಸಹಜವಾಗಿ ನಿಮ್ಮೊಂದಿಗಿನ ವಿಚಾರ ವಿನಿಮಯದ ಮೂಲಕ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಅದರಲ್ಲಿ ನಿಮ್ಮ ಐಪಿ ವಿಳಾಸ, ಬ್ರೌಸರ್, ಬಳಸುವ ಸಾಧನ, ಅದರ ಆಪರೇಟಿಂಗ್ ಸಿಸ್ಟಂ, ನೀವು ಭೇಟಿ ನೀಡಿದ ಸಮಯ, ದಿನಾಂಕ, ಕಳೆದ ಸಮಯ ಎಲ್ಲವೂ ದಾಖಲಾಗುತ್ತದೆ. ಈ ಒಂದು ಮಾಹಿತಿಯು ಗ್ರಾಹಕರ/ಬಳಕೆದಾರರ ನಡವಳಿಕೆಯನ್ನು ವಿಶ್ಲೇಷಿಸಲು ಮತ್ತು ನಮ್ಮ ಜಾಲತಾಣದ ಒಟ್ಟಾರೆಯ ಕಾರ್ಯಶೀಲತೆ ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ.
ನಾವು ಈ ಒಂದು ಮಾಹಿತಿಯನ್ನು ಸಂಗ್ರಹಿಸಲು ವಿವಿಧ ತಂತ್ರಜ್ಞಾನದ ಸೇವೆಗಳನ್ನು ಬಳಸಬಹುದು. ಅದರಲ್ಲಿ ಲಾಗ್ ಫೈಲ್ಗಳು, ವೆಬ್ ಬೀಕನ್ಗಳು ಮತ್ತು ಕುಕೀಸ್ಗಳು ಪ್ರಮುಖವಾದವುಗಳು. ಆಗಾಗ ನೀವು ಜಾಲತಾಣಕ್ಕೆ ಭೇಟಿ ನೀಡಿದಾಗ ಈ ಕುಕೀಸ್ಗಳು ನಮ್ಮ ಬೇಕು ಬೇಡಿಕೆಗಳನ್ನು ಅರಿತುಕೊಂಡು ಅದನ್ನು ಒದಗಿಸಲು ಸಹಾಯ ಮಾಡುತ್ತವೆ. ಹೀಗೆ ಬಹು ಬಳಕೆದಾರರಿಂದ ಒಟ್ಟುಗೂಡಿದ ಈ ದತ್ತಾಂಶವನ್ನು ಪಡೆದು ಅದನ್ನು ವಿಶ್ಲೇಷಿಸುವ ಮೂಲಕ, ಈಗಿನ ಬೇಡಿಕೆಯನ್ನು ತಿಳಿದುಕೊಳ್ಳುವುದರ ಮೂಲಕ ನಮ್ಮ ಸೇವೆಗಳನ್ನು ಅಭಿವೃದ್ಧಿ ಪಡಿಸಲು ಸಹಾಯವಾಗುವುದು, ಜೊತೆಗೆ ಬಳಕೆದಾರರ ಆಸಕ್ತಿ ಮತ್ತು ಅವಶ್ಯಕತೆಗಳನ್ನು ಅರಿತುಕೊಳ್ಳಲು ಸಹಾಯವಾಗುವುದು.
೩. ನಮಗೆ ನೀಡಿದ ನಿಮ್ಮ ಮಾಹಿತಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಅಂದರೆ...
ನೀವು ನೀಡುವ ವೈಯಕ್ತಿಕ ಮಾಹಿತಿಯನ್ನು ನಾವು ಹಲವು ಪ್ರಮುಖ ಉದ್ದೇಶಗಳಿಗೋಸ್ಕರ ಬಳಸಿಕೊಳ್ಳುತ್ತೇವೆ. ಅದರಲ್ಲಿ ಮುಖ್ಯವಾಗಿ,
• ಖಾತೆ ನಿರ್ವಹಣೆ: ನೀವು ನೀಡಿದ ಮಾಹಿತಿಯನ್ನು ನಾವು ಖಾತೆಯನ್ನು ತೆರೆಯಲು, ಅದನ್ನು ನಿರ್ವಹಿಸಲು ಬಳಸಿಕೊಳ್ಳುತ್ತೇವೆ. ಇದು ನಿಮಗೆ ನಿಮ್ಮ ಪ್ರೊಫೈಲ್ ಹಾಗೂ ಬಳಕೆಯ ಪೂರ್ಣ ಇತಿಹಾಸವನ್ನು ತಿಳಿಯಲು ಸಹಾಯವಾಗುತ್ತದೆ. ತನ್ಮೂಲಕ ನಿಮ್ಮ ಚಟುವಟಿಕೆಗಳನ್ನು ನೀವು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಹಾಗೂ ನಿಮ್ಮ ಆದ್ಯತೆಗಳನ್ನು ನಿರ್ವಹಣೆ ಮಾಡಬಹುದು.
• ಸೇವೆಯನ್ನು ತಲುಪಿಸಲು: ನೀವು ನೀಡಿದ ಮಾಹಿತಿಯು ನಿಮ್ಮ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಉತ್ತಮ ರೀತಿಯಲ್ಲಿ ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಅದು ನೀವು ಜಾಲತಾಣದಲ್ಲಿರುವ ಕನ್ನಡ ಮಾತೆಯ ಭಾವಚಿತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಅಥವಾ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳುವ ಅವಕಾಶ ಸಿಕ್ಕಾಗ, ಈಗಾಗಲೇ ಇರುವ ನಿಮ್ಮ ಮಾಹಿತಿಯು ನೀವು ಮನವಿ ಮಾಡಿಕೊಂಡ ಸೇವೆಗಳನ್ನು ಯಾವುದೇ ಅನಗತ್ಯ ಸಮಸ್ಯೆಗಳಿಲ್ಲದೇ/ ತಡ ಮಾಡದೇ ನೀಡಲು ಸಹಾಯವಾಗುತ್ತದೆ.
• ಸಂವಹನ: ನಿಮ್ಮ ಖಾತೆಯ ಕುರಿತಾದ ತ್ವರಿತ ಮಾಹಿತಿಗಳನ್ನು, ಪ್ರಮುಖ ನವೀಕರಣದ ಸಂಗತಿಗಳನ್ನು ಹಂಚಿಕೊಳ್ಳಲು, ಕೆಲವು ಬೇಡಿಕೆ, ತಕರಾರುಗಳಿಗೆ ಸ್ಪಂದಿಸಲು, ನೀತಿ ನಿಯಮಾವಳಿ ಅಥವಾ ನೀಡುವ ಸೇವೆಗಳ ಕುರಿತಾಗಿ ಅಭಿಪ್ರಾಯವನ್ನು ಪಡೆಯಲು ನಿಮ್ಮ ಸಂಪರ್ಕ ಮಾಹಿತಿಯು ಸಹಾಯವಾಗಬಹುದು. ಇದರಿಂದ ನಿಮಗೆ ಪ್ರತಿ ಮಾಹಿತಿಯು ಬೇಗ ತಿಳಿಸಲ್ಪಡುತ್ತದೆ ಮತ್ತು ಅವಶ್ಯಕವೆನಿಸಿದರೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲು ಬಲ ನೀಡುತ್ತದೆ.
• ಮಾರ್ಕೆಟಿಂಗ್ ಸಂವಹನಗಳು: ನಿಮ್ಮ ಅನುಮತಿಯೊಂದಿಗೆ, ನಾವು ನಿಮಗೆ ಸುದ್ದಿಪತ್ರಗಳು, ಪ್ರಚಾರದ ಕೊಡುಗೆಗಳು ಮತ್ತು ನಮ್ಮ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಕುರಿತಾಗಿ ನವೀಕರಣದ ಮಾಹಿತಿಯನ್ನು ಕಳುಹಿಸಬಹುದು. ಇದು ನಮಗೆ ನಿಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇರುವ ಅವಕಾಶವನ್ನು ನಿಮಗೆ ತಿಳಿಸಲು ಸಹಾಯ ಮಾಡುತ್ತದೆ. ನೀವು ಇಂತಹ ಸಂವಹನದ ಸೇವೆಯಿಂದ ಹೊರಗಿರಲು ಕೂಡ ಇಲ್ಲಿ ಅವಕಾಶವಿದೆ.
• ನಮ್ಮ ಸೇವೆಗಳ ಸುಧಾರಣೆ: ಬಳಕೆದಾರರ ಮಾಹಿತಿಯನ್ನು ವಿಶ್ಲೇಷಿಸುವ ಮೂಲಕ, ನಮ್ಮ ಸೇವೆಗಳನ್ನು ಹೇಗೆ ಸಮರ್ಪಕವಾಗಿ ಬಳಸಲಾಗುತ್ತದೆ ಎಂಬುದರ ಕುರಿತು ಒಳನೋಟಗಳನ್ನು ಪಡೆಯಬಹುದು. ಇದು ಯಾವ ಕ್ಷೇತ್ರಗಳಿಗೆ ಸುಧಾರಣೆ ಬೇಕು ಎಂಬುದನ್ನು ಗುರುತಿಸಲು, ನಮ್ಮ ವಿಚಾರಗಳನ್ನು ಅತ್ಯುತ್ತಮಗೊಳಿಸಲು ಅನುಕೂಲವಾಗುತ್ತದೆ. ಜೊತೆಗೆ ಬಳಕೆದಾರರ ಅನುಭವವನ್ನು ಹೆಚ್ಚಿಸಲು, ಅವರ ಅಗತ್ಯಗಳನ್ನು ಪೂರೈಸಲು ಅನುಕೂಲವಾಗುತ್ತದೆ.
• ಗ್ರಾಹಕ ಬೆಂಬಲ: ನಿಮ್ಮ ಮಾಹಿತಿಯು ನಮಗೆ ಪರಿಣಾಮಕಾರಿಯಾಗಿ ಗ್ರಾಹಕ ಸೇವೆಯನ್ನು ನೀಡಲು ಸಹಾಯವಾಗುತ್ತದೆ. ನೀವು ನಿಮ್ಮ ಪ್ರಶ್ನೆಗಳೊಂದಿಗೆ, ಕಾಳಜಿಯೊಂದಿಗೆ ನಮ್ಮನ್ನು ತಲುಪಿದಾಗ, ನಿಮ್ಮ ಖಾತೆಯ ಮಾಹಿತಿಯು ನಮಗೆ ನಿಮ್ಮ ಸಮಸ್ಯೆಗಳನ್ನು ತ್ವರಿತ ರೀತಿಯಲ್ಲಿ ಬಗೆಹರಿಸಲು ಮತ್ತು ನಿಮಗೆ ಸಹಕಾರ ನೀಡಲು ಸಹಾಯ ಮಾಡುತ್ತದೆ.
• ಕಾನೂನು ಅನುಸರಣೆ: ನಾವು ನಿಮ್ಮ ಮಾಹಿತಿಯನ್ನು ಸಂಬಂಧಪಟ್ಟ ಕಾನೂನು ಮತ್ತು ನಿಯಮಾವಳಿಗಳನ್ನು ಅನುಸರಿಸಲು ಬಳಸಬಹುದು. ಈ ಮಾಹಿತಿಯನ್ನು ನಾವು ಅಧಿಕಾರಿಗಳಿಂದ ಬರುವ ಕಾನೂನುಬದ್ಧ ವಿನಂತಿಗಳಿಗೆ ಪ್ರತಿಕ್ರಿಯಿಸಲು ಮತ್ತು ನಮ್ಮ ಕಾರ್ಯಾಚರಣೆಗಳು ಕಾನೂನು ಸಂಬಂಧಿತ ಮಾನದಂಡಗಳಿಗೆ ಬದ್ಧವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಳಸಬಹುದು.
• ಭದ್ರತಾ ಕ್ರಮಗಳು: ಸಂಗ್ರಹಿಸಿದ ನಿಮ್ಮ ಮಾಹಿತಿಯನ್ನು ನಾವು ನಮ್ಮ ಜಾಲತಾಣವನ್ನು ಹಾಗೂ ಬಳಕೆದಾರರನ್ನು ವಂಚನೆಯ ಚಟುವಟಿಕೆಗಳು ಇಲ್ಲವೇ ಭದ್ರತಾ ಉಲ್ಲಂಘನೆಗಳಿಂದ ರಕ್ಷಿಸಲು ನಾವು ಬಳಸಬಹುದು. ಇದರಲ್ಲಿ ಅನುಮಾನಾಸ್ಪದ ನಡವಳಿಕೆಯ ಮೇಲೆ ಮೇಲ್ವಿಚಾರಣೆ ಮಾಡುವುದು ಮತ್ತು ನಮ್ಮ ವ್ಯವಸ್ಥೆಯನ್ನು ಸುರಕ್ಷಿತವಾಗಿಡಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದು ಒಳಗೊಂಡಿರುತ್ತದೆ.
• ವಿಶ್ಲೇಷಣೆ ಮತ್ತು ಸಂಶೋಧನೆ: ಸಂಶೋಧನಾ ಉದ್ದೇಶಗಳಿಗಾಗಿ ನಾವು ಸಂಗ್ರಹಿಸಿದ ಮತ್ತು ಅನಾಮಧೇಯಗೊಳಿಸಿದ ಮಾಹಿತಿಯನ್ನು ಬಳಸುತ್ತೇವೆ. ಇದು ವ್ಯಾಪಕವಾದ ಬಳಕೆದಾರರ ಪ್ರವೃತ್ತಿ ಮತ್ತು ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ಕಾರ್ಯತಂತ್ರದ ಯೋಜನೆ ಮತ್ತು ನಿರ್ಧಾರ ಮಾಡುವ ಪ್ರಕ್ರಿಯೆಗಳಿಗೆ ಕೊಡುಗೆ ನೀಡುತ್ತದೆ.
ಈ ರೀತಿಯಲ್ಲಿ ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳುವ ಮೂಲಕ, ನಮ್ಮ ತಾಣದ ಮೂಲಕ ವೈಯಕ್ತೀಕರಿಸಿದ ಮತ್ತು ತೊಡಗಿಸಿಕೊಳ್ಳುವ ಅನುಭವವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ.
೪. vishwakannadigaru.com ಜಾಲತಾಣದಲ್ಲಿರುವ ನನ್ನ ಮಾಹಿತಿಯನ್ನು ಹೇಗೆ ತೆಗೆದು ಹಾಕುವುದು?
vishwakannadigaru.com ಜಾಲತಾಣದಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ನೀವು ಇಚ್ಛೆ ಪಟ್ಟರೆ, ಅದಕ್ಕಾಗಿ ತಾವು support@vishwakannadigaru.com ಗೆ ಇಮೇಲ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ನೀವು ನೀಡುವ ವಿನಂತಿಯಲ್ಲಿ, ನಿಮ್ಮ ಖಾತೆಯ ಮಾಹಿತಿಯನ್ನು ಮತ್ತು ನಿಮ್ಮ ಮಾಹಿತಿಯನ್ನು ತೆಗೆದುಹಾಕಬೇಕು ಎಂಬುದರ ಕುರಿತಾಗಿಯೂ ತಿಳಿಸಬೇಕು. ನಿಮ್ಮ ಮನವಿಯನ್ನು ಸ್ವೀಕರಿಸಿ ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗುವಂತೆ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲು ಸೂಕ್ರ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಇನ್ನೊಂದು ವಿಚಾರವನ್ನು ತಿಳಿಸುವುದಾದರೆ, ನಮ್ಮ ಸಕ್ರಿಯ ಮಾಹಿತಿ ಕೇಂದ್ರದಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದು ಹಾಕುವಾಗ ನಾವು ಕೆಲವು ಮಾಹಿತಿಯನ್ನು ಬ್ಯಾಕಪ್ ಕಡತಗಳಲ್ಲಿ ಉಳಿಸಿಕೊಳ್ಳಬಹುದು. ಅದು ಕಾನೂನು ಪಾಲನೆಗೆ ಅನುಕೂಲವಾಗುವುದು. ಯಾವ ಮಾಹಿತಿಯನ್ನು ತೆಗೆದುಹಾಕಲಾಗಿದೆ ಮತ್ತು ಕಾನೂನು ಅನುಸರಣೆಗೆ ಯಾವ ಮಾಹಿತಿಯನ್ನು ಉಳಿಸಿಕೊಳ್ಳಲಾಗಿದೆ ಎಂಬುದನ್ನು ತಿಳಿಸಲಾಗುವುದು.
೫. ಕುಕೀಸ್ಗಳು ಅಂದ್ರೆ ಏನು?
ಕುಕೀಸ್ಗಳು ನೀವು ನಮ್ಮ ಜಾಲತಾಣಕ್ಕೆ ಭೇಟಿ ನೀಡಿದಾಗ ನಿಮ್ಮ ವೆಬ್ ಬ್ರೌಸರ್ನಿಂದ ನಿಮ್ಮ ಸಾಧನದಲ್ಲಿ ಸಂಗ್ರಹಿಸಲಾದ ಸಣ್ಣಪುಟ್ಟದಾದ ಪಠ್ಯವನ್ನೊಳಗೊಂಡ ಫೈಲ್ಗಳಾಗಿರುತ್ತವೆ. ಜಾಲತಾಣಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಅವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕುಕೀಸ್ಗಳು ನಿಮ್ಮ ಆದ್ಯತೆಗಳನ್ನು ನೆನಪಿಟ್ಟುಕೊಳ್ಳಬಹುದು, ಬಳಕೆದಾರರು ನಮ್ಮ ತಾಣದೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಬಹುದು ಮತ್ತು ನ್ಯಾವಿಗೇಷನ್ ಮತ್ತು ಉಪಯುಕ್ತತೆಯನ್ನು ಸುಧಾರಿಸುವ ಕೆಲವು ಕಾರ್ಯಗಳನ್ನು ಇದರಿಂದ ಸಕ್ರಿಯಗೊಳಿಸಬಹುದು. ನಾವು ಬೇರೆ ಬೇರೆ ತರಹದ ಕುಕಿಸ್ಗಳನ್ನು ಉಪಯೋಗಿಸಬಹುದು ಅವುಗಳು:
• ಸೆಷನ್ ಕುಕೀಸ್ಗಳು: ಇವುಗಳು ತಾತ್ಕಾಲಿಕ ಕುಕೀಸ್ಗಳಾಗಿದ್ದು, ನಿಮ್ಮ ಬ್ರೌಸರ್ ಅನ್ನು ಮುಚ್ಚಿದ ನಂತರ ಇವುಗಳ ಕಾಲಾವಧಿ ಮುಗಿಯುತ್ತದೆ. ಇವುಗಳನ್ನು ಒಂದೇ ಬಾರಿ ನಮ್ಮ ಜಾಲತಾಣಕ್ಕೆ ಭೇಟಿ ನೀಡುವವರ ಚಲನವಲನವನ್ನು ಗುರುತಿಸಲು ಬಳಸಲಾಗುತ್ತದೆ ಮತ್ತು ಇವು ತಡೆರಹಿತವಾದ ಬ್ರೌಸಿಂಗ್ ಅನುಭವವನ್ನು ಒದಗಿಸಲು ನಮಗೆ ಅನುಮತಿಸುತ್ತವೆ.
• ನಿರಂತರವಾದ ಕುಕೀಸ್ಗಳು: ಈ ಕುಕೀಸ್ಗಳು ನಿಮ್ಮ ಉಪಕರಣದಲ್ಲಿ ಬ್ರೌಸರ್ ಅನ್ನು ನೀವು ಮುಚ್ಚಿದ ನಂತರವೂ ನಿರ್ದಿಷ್ಟ ಅವಧಿಯವರೆಗೆ ಉಳಿಯುತ್ತವೆ. ಇವುಗಳನ್ನು ನೀವು ಮುಂದಿನ ಸಲದ ಜಾಲತಾಣಗಳ ಭೇಟಿಗೆ ಬಂದಾಗ ನಿಮ್ಮ ಆದ್ಯತೆಗಳು ಮತ್ತು ಸೆಟ್ಟಿಂಗ್ಗಳನ್ನು ನೆನಪಿಟ್ಟುಕೊಳ್ಳಲು ಬಳಸಲಾಗುತ್ತದೆ. ಇವು ಹೆಚ್ಚು ವೈಯಕ್ತೀಕರಿಸಿದ ಅನುಭವವನ್ನು ಬಳಕೆದಾರರಿಗೆ ನೀಡುತ್ತವೆ.
೬. ಕುಕೀಸ್ಗಳಿಂದ ಪಡೆದ ಮಾಹಿತಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ?
ಈ ಕೆಳಗಿನ ವಿಧಾನಗಳ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಲು ನಾವು ಕುಕೀಸ್ಗಳು ಮತ್ತು ಇದಕ್ಕೆ ಸಾಮ್ಯತೆ ಹೊಂದಿರುವ ತಂತ್ರಜ್ಞಾನಗಳನ್ನು ಬಳಸುತ್ತೇವೆ:
• ವೈಯಕ್ತೀಕರಣ: ಕುಕೀಸ್ಗಳು ನಮಗೆ ನಿಮ್ಮ ವೈಯಕ್ತಿಕ ಆದ್ಯತೆಗಳಾದ ಅಂದರೆ ನಿಮ್ಮ ಭಾಷೆಯ ಸೆಟ್ಟಿಂಗ್ ಮತ್ತು ಲಾಗಿನ್ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಇದರಿಂದ ನೀವು ಪ್ರತಿಬಾರಿ ಜಾಲತಾಣಕ್ಕೆ ಭೇಟಿ ನೀಡಿದಾಗ ಈ ಮಾಹಿತಿಗಳನ್ನು ಪದೇ ಪದೇ ನೀಡಬೇಕಾಗಿಲ್ಲ.
• ವಿಶ್ಲೇಷಣೆ: ಕುಕೀಸ್ಗಳ ಮೂಲಕ ಬಳಕೆದಾರರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾಡಿದ ಸಂವಹನದ ಮಾಹಿತಿಯನ್ನು ಒಂದೆಡೆ ಸಂಗ್ರಹಿಸಲು ಸಾಧ್ಯವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಬಳಕೆದಾರರು ತಾಣದ ಯಾವ ಪೇಜ್ಗಳನ್ನು ಹೆಚ್ಚು ಭೇಟಿ ಮಾಡಿದ್ದಾರೆ ಮತ್ತು ತಾಣದಲ್ಲಿ ಎಷ್ಟು ಸರಾಸರಿ ಸಮಯವನ್ನು ಕಳೆದಿದ್ದಾರೆ ಎಂಬುದನ್ನು ಕೂಡ ತಿಳಿಯಲಾಗುತ್ತದೆ. ಈ ಒಂದು ಮಾಹಿತಿಯು ವರ್ತಮಾನದ ಟ್ರೆಂಡ್ಗಳನ್ನು ಮತ್ತು ದತ್ತಾಂಶ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲು ನಮಗೆ ಸಹಾಯ ಮಾಡುತ್ತವೆ.
• ಜಾಹೀರಾತು: ಕುಕೀಸ್ಗಳನ್ನು ನಿಮ್ಮ ಬ್ರೌಸಿಂಗ್ ನಡವಳಿಕೆಯ ಹಿನ್ನೆಲೆಯ ಆಧಾರದ ಮೇಲೆ ಸಂಬಂಧಿತ ಜಾಹೀರಾತುಗಳನ್ನು ನೀಡಲು ಸಹ ಬಳಸಬಹುದು. ನಿಮ್ಮ ಆಸಕ್ತಿಗಳನ್ನು ಟ್ರ್ಯಾಕ್ ಮಾಡುವ ಮೂಲಕ, ನೀವು ನೋಡುವ ಜಾಹೀರಾತುಗಳು ನಿಮ್ಮ ಆದ್ಯತೆಗಳ ಅನುಸಾರವೇ ಜೋಡಿಸಲ್ಪಟ್ಟಿವೆ ಎಂದು ನಾವು ದೃಢೀಕರಿಸಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಒಟ್ಟಾರೆಯ ಅನುಭವವನ್ನು ಹೆಚ್ಚಿಸಿಕೊಳ್ಳಬಹುದು.
ನೀವು ಬಳಸುವ ಸಾಧನದಲ್ಲಿನ ಬ್ರೌಸರ್ ಸೆಟ್ಟಿಂಗ್ನ ಮೂಲಕ ನಿಮ್ಮ ಕುಕೀಸ್ಗಳನ್ನು ನಿಮ್ಮ ಆದ್ಯತೆಯ ಅನುಸಾರವಾಗಿಯೇ ನಿರ್ವಹಿಸಬಹುದು. ಇದರಿಂದ ನಿಮಗೆ ಬೇಕಾದ ಕುಕೀಸ್ಗಳನ್ನು ಸ್ವೀಕರಿಸುವ, ಬೇಡವಾದುದನ್ನು ತಿರಸ್ಕರಿಸುವ ಆಯ್ಕೆ ನಿಮ್ಮದಾಗಿರುತ್ತದೆ. ಇದರಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ತಿರಸ್ಕರಿಸಲ್ಪಟ್ಟ ಕುಕೀಸ್ಗಳು ತಾಣದ ಕ್ರಿಯಾತ್ಮಕತೆ ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನೀವು ಅರಿಯಬೇಕು.
೭. ಮೂರನೇ ವ್ಯಕ್ತಿಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು
ನಾವು ನಿಮ್ಮ ಸ್ಪಷ್ಟವಾದ ಅನುಮತಿಯಿಲ್ಲದೇ, ಹೊರಗಿನ ವ್ಯಕ್ತಿಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದು, ವ್ಯವಹಾರ ಕುದುರಿಸುವುದು ಇಲ್ಲವೇ ಹೊರಗಿನ ವ್ಯಕ್ತಿಗಳಿಗೆ ಪರಭಾರೆ ಮಾಡುವುದನ್ನು ಮಾಡುವುದಿಲ್ಲ. ನಮ್ಮ ಜಾಲತಾಣವನ್ನು ನಿರ್ವಹಿಸುವ ಮತ್ತು ಸೇವೆಗಳನ್ನು ನೀಡುವ ನಮ್ಮ ವಿಶ್ವಾಸಾರ್ಹ ಮೂರನೇ ಪಾರ್ಟಿಯೊಂದಿಗೆ ಮಾತ್ರ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು. ಈ ಸೇವಾದಾರರು ನಮ್ಮ ವ್ಯವಹಾರದಲ್ಲಿ ಭಾಗಿಯಾಗಿದ್ದು ನಮ್ಮ ಗೌಪ್ಯತೆಯ ನೀತಿಗಳಿಗೆ ಬದ್ಧರಾಗಿರುವ ಇವರಿಗೆ ಮಾತ್ರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಳ್ಳಲು ಅವಕಾಶವಿದೆ.
ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ನಾವು ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸಬಹುದು:
• ಕಾನೂನು ಅವಶ್ಯಕತೆಗಳು: ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಅವಶ್ಯಕತೆ ಬಂದಾಗ ಇಲ್ಲವೇ ಸಾರ್ವಜನಿಕ ಅಧಿಕಾರಿಗಳಿಂದ ಮನವಿಗಳು ಬಂದಾಗ ನಾವು ಬಹಿರಂಗ ಪಡಿಸಬಹುದು.
• ವ್ಯವಹಾರಿಕ ವರ್ಗಾವಣೆ: ಈ ಜಾಲತಾಣಕ್ಕೆ ಸಂಬಂಧಪಟ್ಟ ಸ್ವತ್ತನ್ನು ಸ್ವಾಧೀನ ಪಡಿಸುವಾಗ, ವಿಲೀನಗೊಳಿಸುವಾಗ ಇಲ್ಲವೇ ಮಾರಾಟ ಮಾಡುವ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮ್ಮ ವ್ಯವಹಾರದ ಒಂದು ಸ್ವರೂಪವಾಗಿ ವರ್ಗಾಯಿಸಬಹುದು. ನಮ್ಮ ಜಾಲತಾಣವನ್ನು ಬಳಸಿಕೊಳ್ಳುವ ಮೂಲಕ ಮೇಲೆ ವಿವರಿಸಿದಂತೆ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ನೀವು ನಮಗೆ ಒಪ್ಪಿಗೆಯನ್ನು ನೀಡಿರುತ್ತೀರಿ.
೮. ನೂತನ ಸೇವೆಗಳು ಮತ್ತು ಬದಲಾವಣೆಗಳ ಸೂಚನೆ
ನಾವು ನಮ್ಮ ಜಾಲತಾಣದಲ್ಲಿ ಹೊಸ ಹೊಸ ಸೇವೆಗಳು ಅಥವಾ ವೈಶಿಷ್ಟ್ಯಗಳನ್ನು ನಿಯತಕಾಲಿಕವಾಗಿ ಪರಿಚಯಿಸಬಹುದು. ಈ ಒಂದು ಬದಲಾವಣೆಗಳು, ನಿಮ್ಮ ವೈಯಕ್ತಿಕ ಮಾಹಿತಿಯ ಸಂಗ್ರಹಣೆ, ಬಳಕೆ ಅಥವಾ ಬಹಿರಂಗಪಡಿಸುವಿಕೆಯನ್ನು ಒಳಗೊಂಡಿದ್ದರೆ, ನಮ್ಮ ಗೌಪ್ಯತೆಯ ನೀತಿಯನ್ನು ನವೀಕರಿಸುವ ಮೂಲಕ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ಒಪ್ಪಿಗೆಯನ್ನು ಪಡೆಯುವ ಮೂಲಕ ನಾವೇ ನಿಮಗೆ ತಿಳಿಸುತ್ತೇವೆ. ನಮ್ಮ ನೀತಿಗಳನ್ನು ನಿಯಮಿತವಾಗಿ ಪರಿಶೀಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇದರಿಂದ ನಾವು ನಮ್ಮ ಕಾರ್ಯಗಳಲ್ಲಿ ಮಾಡುವ ಬದಲಾವಣೆಗಳು ಅದು ನಿಮ್ಮ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿಯಲು ನಿಮಗೆ ಅನುಕೂಲ ಮಾಡಿಕೊಡುತ್ತದೆ ಮತ್ತು ನಾವು ಪರಿಣಾಮಕಾರಿ ಬದಲಾವಣೆಗಳನ್ನು ನಮ್ಮ ಗೌಪ್ಯತೆಯ ನೀತಿಯಲ್ಲಿ ಮಾಡಿದಾಗ, ನಾವು ನಿಮಗೆ ನಮ್ಮ ಜಾಲತಾಣದ ಮೂಲಕ ಅಥವಾ ಇಮೇಲ್ ಮೂಲಕ ನಿಮಗೆ ಸಂದೇಶವನ್ನು ನೀಡುತ್ತೇವೆ. ನಿರಂತರವಾಗಿ ನಮ್ಮ ಜಾಲತಾಣವನ್ನು ನೀವು ಉಪಯೋಗಿಸುವುದು ನಮ್ಮ ಗೌಪ್ಯತೆಯ ನೀತಿಗೆ ನಿಮ್ಮ ಅನುಮತಿಯನ್ನು ಸೂಚಿಸಿದಂತೆ ಎಂದು ನಂಬಲಾಗುತ್ತದೆ.
೯. ಮಾಹಿತಿ ಪ್ರಸರಣವನ್ನು ನಾವು ಹೇಗೆ ಸಂರಕ್ಷಿಸಿಕೊಳ್ಳುವುದು?
ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಯು ನಮಗೆ ಅತ್ಯಂತ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅನಧಿಕೃತ ಪ್ರವೇಶ, ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ನಾಶ, ಹಾಳಾಗುವಿಕೆಯ ವಿರುದ್ಧ ನಿಮ್ಮ ಮಾಹಿತಿಯನ್ನು ರಕ್ಷಿಸಲು ಸೂಕ್ತವಾದ ತಾಂತ್ರಿಕ ಮತ್ತು ಸಾಂಫಿಕವಾದ ಕ್ರಮಗಳನ್ನು ನಾವು ಕಾರ್ಯಗತಗೊಳಿಸುತ್ತೇವೆ. ಇದರಲ್ಲಿ ಒಳಗೊಳ್ಳುವ ಮಾಪನಗಳೆಂದರೆ,
• ಎನ್ಕ್ರಿಪ್ಷನ್: ನಾವು ಎನ್ಕ್ರಿಪ್ಷನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮಾಹಿತಿ ಪ್ರಸರಣವನ್ನು ಸುರಕ್ಷಿತಗೊಳಿಸುತ್ತೇವೆ. ಅದರಲ್ಲೂ ಬಹುಮುಖ್ಯವಾಗಿ ಹಣ ವರ್ಗಾವಣೆಯ ಸಮಯದಲ್ಲಿ.
• ಸುರಕ್ಷಿತ ಸರ್ವರ್ಗಳು: ನಮ್ಮ ಜಾಲತಾಣವು ಅನಧಿಕೃತ ಪ್ರವೇಶವನ್ನು ತಡೆಯಲು ಸುಧಾರಿತವಾದ ಭದ್ರತಾ ಪ್ರೋಟೋಕಾಲ್ಗಳನ್ನು ಬಳಸುವ ಸುರಕ್ಷಿತ ಸರ್ವರ್ಗಳನ್ನು ಒಳಗೊಂಡಿದೆ.
• ನಿಯಮಿತ ಭದ್ರತಾ ಲೆಕ್ಕಪರಿಶೋಧನೆಗಳು: ನಾವು ನಿಯಮಿತವಾಗಿ ಭದ್ರತಾ ಮೌಲ್ಯಮಾಪನಗಳನ್ನು ಮಾಡುತ್ತಾ ಇರುವ ದೋಷಗಳನ್ನು ಗುರುತಿಸುವ ಮತ್ತು ನಮ್ಮ ರಕ್ಷಣಾ ಕ್ರಮಗಳು ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಿರುತ್ತೇವೆ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿರುವಾಗ, ಅಂತರ್ಜಾಲ ಅಥವಾ ಎಲೆಕ್ಟ್ರಾನಿಕ್ ಸಂಗ್ರಹಣೆಯ ಮೂಲಕ ಪ್ರಸರಣ ಮಾಡುವ ಯಾವುದೇ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಬೇಕು. ಆದ್ದರಿಂದ, ನಾವು ದೃಢವಾದ ಭದ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸುವಾಗ, ಸಂಪೂರ್ಣ ಭದ್ರತೆಯ ಕುರಿತಾಗಿ ಗ್ಯಾರೆಂಟಿ ನೀಡುವುದಿಲ್ಲ.
೧೦. ನಿಮ್ಮ ಮಾಹಿತಿಯನ್ನು ಪ್ರವೇಶಿಸಿ ಅದನ್ನು ಹೇಗೆ ತಿದ್ದುಪಡಿ ಮಾಡುತ್ತೀರಿ?
ನಾವು ಹೊಂದಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯಲು, ನವೀಕರಿಸಲು ಅಥವಾ ಸರಿಪಡಿಸಲು ನಿಮಗೆ ಹಕ್ಕಿದೆ. ನಿಮ್ಮ ಮಾಹಿತಿಯನ್ನು ಪ್ರವೇಶಿಸಲು, ನಮ್ಮ ತಾಣದಲ್ಲಿ ನಿಮ್ಮ ಖಾತೆಗೆ ಲಾಗ್ಇನ್ ಮಾಡಿ ಮತ್ತು ನಿಮ್ಮ ಪ್ರೊಫೈಲ್ ಸೆಟ್ಟಿಂಗ್ಗೆ ನಿರ್ದೇಶನ ನೀಡಿ. ತನ್ಮೂಲಕ ನಿಮ್ಮ ವೈಯಕ್ತಿಕ ವಿವರಗಳನ್ನು ಅಗತ್ಯವಿರುವಂತೆ ನೀವು ಪರಿಶೀಲಿಸಬಹುದು ಮತ್ತು ತಿದ್ದುಪಡಿ ಮಾಡಬಹುದು.
ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಲ್ಲವೇ ನಮ್ಮ ಸಹಾಯದ ಅಗತ್ಯವಿದ್ದರೆ, ದಯವಿಟ್ಟು support@vishwakannadigaru.com ನ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಮನವಿಯ ಅನುಸಾರವಾಗಿ ನಾವು ನಿಮಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತೇವೆ ಮತ್ತು ನಿಮ್ಮ ಮಾಹಿತಿಯನ್ನು ನಿಖರ ಹಾಗೂ ನವೀಕೃತಗೊಳಿಸಲು ಯಾವುದೇ ಅಗತ್ಯವಾದ ತಿದ್ದುಪಡಿಗಳನ್ನು ಮಾಡಿಕೊಡುತ್ತೇವೆ.
೧೧. ನಿರ್ದಿಷ್ಟ ಪ್ರಕಟಣೆಗಳು
ಈ ಕೆಳಗಿನ ಸಂದರ್ಭಗಳಲ್ಲಿ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬಹುದು:
• ಕಾನೂನುಗಳ ಅನುಸರಣೆ: ನಾವು ನಿಮ್ಮ ಮಾಹಿತಿಯನ್ನು, ಇದಕ್ಕೆ ಅನ್ವಯವಾಗುವ ಕಾನೂನುಗಳು, ನಿಬಂಧನೆಗಳು ಅಥವಾ ಅಧಿಕಾರಿಗಳಿಂದ ಬಂದಿರುವ ಕಾನೂನು ವಿನಂತಿಗಳ ಅನುಸಾರ ಬಹಿರಂಗಪಡಿಸಬಹುದು.
• ಹಕ್ಕುಗಳ ರಕ್ಷಣೆ: ನಾವು ನಿಮ್ಮ ಮಾಹಿತಿಯನ್ನು, ನಮ್ಮ ಹಕ್ಕುಗಳು, ಆಸ್ತಿ ಅಥವಾ ಸುರಕ್ಷತೆ ಅಥವಾ ನಮ್ಮ ಬಳಕೆದಾರರು ಅಥವಾ ಇತರರ ರಕ್ಷಣೆಗಾಗಿ ಬಹಿರಂಗಪಡಿಸಬಹುದು.
• ವಂಚನೆ ತಡೆಗಟ್ಟುವಿಕೆ: ಅಕಸ್ಮಾತ್ ನಾವು ಮೋಸದ ಚಟುವಟಿಕೆ ಅಥವಾ ಭದ್ರತಾ ಉಲ್ಲಂಘನೆಗಳನ್ನು ಕಂಡರೆ, ಅನುಮಾನ ಪಟ್ಟರೆ ನಾವು ತನಿಖೆ ಮಾಡಲು ಮತ್ತು ಆ ಪರಿಸ್ಥಿತಿಯನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬಹುದು.
ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮ್ಮ ಹಕ್ಕುಗಳನ್ನು ರಕ್ಷಿಸಲು ಅಥವಾ ನಮ್ಮ ಕಾನೂನು ಬಾಧ್ಯತೆಗಳನ್ನು ಪೂರೈಸಲು ಅಗತ್ಯವೆಂದು ನಾವು ಭಾವಿಸಿದಾಗ ಮಾತ್ರ ಬಹಿರಂಗಪಡಿಸುತ್ತೇವೆ.
೧೨. ನಮ್ಮ ವೆಬ್ಸೈಟ್ಗೆ ಸಂಪರ್ಕ ಪಡೆದುಕೊಂಡಿರುವ ಉಳಿದ ಜಾಲತಾಣಗಳ ಬಗ್ಗೆ ತಿಳಿಸಿ?
ನಮ್ಮ vishwakannadigaru.com ತಾಣವು ಮೂರನೇ ವ್ಯಕ್ತಿಗಳ ವೆಬ್ಸೈಟ್ಗಳ ಸಂಪರ್ಕ ಕೊಂಡಿಗಳನ್ನು ಒಳಗೊಂಡಿದ್ದು ಅದರ ಮಾಲಿಕತ್ವ ಮತ್ತು ನಿಯಂತ್ರಿಸುವ ಅಧಿಕಾರವನ್ನು ಹೊಂದಿರುವುದಿಲ್ಲ. ಹಾಗಾಗಿ ಹೊರಗಿನ ತಾಣಗಳ ಗೌಪ್ಯತೆ ಅಭ್ಯಾಸಗಳು, ಸುರಕ್ಷತಾ ವಿಧಾನಗಳಿಗೆ ನಾವು ಜವಾಬ್ದಾರಿಯಾಗಿರುವುದಿಲ್ಲ. ಆ ನಿಟ್ಟಿನಲ್ಲಿ ನಿಮ್ಮ ಮಾಹಿತಿಯನ್ನು ಅದು ಹೇಗೆ ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೀವು ಭೇಟಿ ನೀಡುವ ಯಾವುದೇ ಮೂರನೇ ವ್ಯಕ್ತಿಯ ತಾಣಗಳ ಗೌಪ್ಯತೆಯ ನೀತಿಗಳನ್ನು ಪರಿಶೀಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಈ ಲಿಂಕ್ಗಳನ್ನು ನಿಮ್ಮ ಅನುಕೂಲಕ್ಕೋಸ್ಕರ ಮಾತ್ರ ನೀಡಲಾಗಿರುತ್ತದೆ ಮತ್ತು ಅವುಗಳ ಸೇರ್ಪಡೆಯು ಲಿಂಕ್ ಮಾಡಿದ ತಾಣಗಳ ಅನುಮೋದನೆಯನ್ನು ಸೂಚಿಸುವುದಿಲ್ಲ. ಬಾಹ್ಯ ಕೊಂಡಿಗಳ ಮೇಲೆ ಕ್ಲಿಕ್ ಮಾಡುವಾಗ ನೀವು ಸಾಧ್ಯವಾದಷ್ಟು ಜಾಗರೂಕರಾಗಿರಿ ಎಂಬುದನ್ನು ನಾವು ಒತ್ತಿ ಹೇಳುತ್ತೇವೆ.
೧೩. ಮರುಪಾವತಿಯ ನೀತಿ
• ನಮ್ಮ vishwakannadigaru.com ನಲ್ಲಿ ಪ್ರಿಂಟ್ ಕ್ಯಾಲೆಂಡರ್ ಆರ್ಡರ್ಗಳಿಗಾಗಿ ನೀಡಲಾದ ಯಾವುದೇ ಮರುಪಾವತಿಯನ್ನು ಖರೀದಿಯ ಸಮಯದಲ್ಲಿ ಬಳಸಿದ ನಿರ್ದಿಷ್ಟ ಪಾವತಿ ವಿಧಾನಕ್ಕೆ ಅನುಸಾರವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.
• ಮರುಪಾವತಿ ವಿನಂತಿಗಳಿಗೆ ಕೆಲವೊಮ್ಮೆ ವರ್ಗಾವಣೆಯ ಪರಿಶೀಲನೆಯ ಅವಶ್ಯಕವಿರುತ್ತದೆ. ಅದು ಖರೀದಿಯ ದಾಖಲೆಯಾಗಿರಬಹುದು. ಹೀಗೆ ಬಳಕೆಯ ನಿಯಮಗಳಲ್ಲಿ ವಿವರಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಅದನ್ನು ಪರಿಗಣಿಸಬಹುದು.
• ಮರುಪಾವತಿ ಪ್ರಕ್ರಿಯೆಯ ಸಮಯದಲ್ಲಿ ಒದಗಿಸಲಾದ ವೈಯಕ್ತಿಕ ಮಾಹಿತಿಯನ್ನು ಕಟ್ಟುನಿಟ್ಟಾದ ವಿಶ್ವಾಸದಿಂದ ಪರಿಗಣಿಸಲಾಗುತ್ತದೆ ಮತ್ತು ನಮ್ಮ ಗೌಪ್ಯತೆಯ ನೀತಿಗೆ ಅನುಗುಣವಾಗಿ ಮರುಪಾವತಿಯನ್ನು ಪ್ರಕ್ರಿಯೆಗೊಳಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ.
೧೪. ವಾಪಸಾತಿಯ ನೀತಿ
• ಪ್ರಿಂಟ್ ಕ್ಯಾಲೆಂಡರ್ಗಳನ್ನು ಒಳಗೊಂಡ ಆರ್ಡರ್ಗಳು ಕೆಲವೊಮ್ಮೆ ದೋಷಪೂರಿತವಾಗಿದ್ದರೆ, ಹಾನಿಗೊಳಗಾಗಿದ್ದರೆ ಅಥವಾ ಮೂಲ ಆರ್ಡರ್ನ ವಿಶೇಷಣಗಳಿಗೆ ಹೊಂದಿಕೆಯಾಗದಿದ್ದರೆ ಮಾತ್ರ ಅವುಗಳ ವಾಪಸಾತಿಯನ್ನು ಸ್ವೀಕರಿಸಲಾಗುತ್ತದೆ.
• ಎಲ್ಲಾ ವಾಪಸಾತಿಯ ಮನವಿಗಳನ್ನು ವಿತರಣೆಯಾದ ಹದಿನೈದು ದಿನದೊಳಗೆ ಸಲ್ಲಿಸಬೇಕು ಮತ್ತು ಅದನ್ನು ಅರ್ಹತೆಗಾಗಿ ಪರಿಶೀಲಿಸಲಾಗುತ್ತದೆ. ಈ ವಾಪಾಸು ಪ್ರಕ್ರಿಯೆಯಲ್ಲಿ ಸಂಗ್ರಹಿಸಲಾದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದರ ಜೊತೆಗೆ ಅದನ್ನು ವಾಪಾಸು ಪ್ರಕ್ರಿಯೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.
೧೫. ರದ್ದು ಪಡಿಸುವಿಕೆಯ ನೀತಿ
• ಪ್ರಿಂಟ್ ಆರ್ಡರ್ಗಳನ್ನು ಶಿಪ್ಪಿಂಗ್ಗೆ ಕಳುಹಿಸುವ ಮುನ್ನವೇ ವಿನಂತಿಸಿಕೊಂಡರೆ, ಆರ್ಡರ್ಗಳ ರದ್ದತಿಗಳನ್ನು ಸ್ವೀಕರಿಸಲಾಗುತ್ತದೆ. ಸಾಗಣೆಯ ನಂತರ ಆರ್ಡರ್ಗಳನ್ನು ರದ್ದುಗೊಳಿಸಲಾಗುವುದಿಲ್ಲ.
• ರದ್ದತಿ ಪ್ರಕ್ರಿಯೆಯಲ್ಲಿ ಒದಗಿಸಲಾದ ಯಾವುದೇ ಮಾಹಿತಿಯನ್ನು ನಮ್ಮ ಗೌಪ್ಯತೆ ನೀತಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ ಮತ್ತು ರದ್ದತಿಯನ್ನು ದೃಢೀಕರಿಸುವ ಮತ್ತು ಪ್ರಕ್ರಿಯೆಗೊಳಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ.
೧೬. ನಿಮ್ಮ ಒಪ್ಪಿಗೆ
ನಮ್ಮ ತಾಣವನ್ನು ಬಳಸುವ ಮೂಲಕ, ಗೌಪ್ಯತೆಯ ನೀತಿ ಹಾಗೂ ಇಲ್ಲಿ ತಿಳಿಸಲ್ಪಟ್ಟಂತೆ ನಿಮ್ಮ ಮಾಹಿತಿಯ ಸಂಗ್ರಹಣೆ, ಬಳಕೆ ಮತ್ತು ಬಹಿರಂಗಪಡಿಸುವಿಕೆಗೆ ನೀವು ಸಮ್ಮತಿಸುತ್ತೀರಿ. ಈ ನೀತಿಗೆ ನಾವು ಬದಲಾವಣೆಗಳನ್ನು ಮಾಡಿದರೆ, ನಾವು ಈ ಪುಟದ ಮೇಲ್ಭಾಗದಲ್ಲಿ ಬದಲಾದ ಗೌಪ್ಯತೆಯ ನೀತಿಯ ಜಾರಿಯ ದಿನಾಂಕವನ್ನು ತಿಳಿಸುತ್ತೇವೆ ಮತ್ತು ಅದನ್ನು ಸೂಕ್ತವಾದ ವಾಹಿನಿಗಳ ಮೂಲಕ ನಿಮಗೆ ತಿಳಿಸುತ್ತೇವೆ.
ಈ ಗೌಪ್ಯತೆಯ ನೀತಿಯು ನಮ್ಮ ಜಾಲತಾಣದ ಚಟುವಟಿಕೆಗಳ ಬಗ್ಗೆ ಪಾರದರ್ಶಕತೆಯನ್ನು ಒದಗಿಸಲು ಮತ್ತು ನಿಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ದೃಢಪಡಿಸಿಕೊಳ್ಳಲು ನೀಡಲಾಗಿದೆ.