vk-logo ಬಳಕೆಯ ನಿಯಮಗಳು

vishwakannadigaru.com ತಾಣಕ್ಕೆ ಸುಸ್ವಾಗತ. ಈ ಜಾಲತಾಣವನ್ನು ಪ್ರವೇಶಿಸುವ ಮೂಲಕ ಅಥವಾ ಬಳಸುವ ಮೂಲಕ, ನೀವು ಈ ಬಳಕೆಯ ನಿಯಮಗಳನ್ನು ಅನುಸರಿಸಲು ಮತ್ತು ಅದಕ್ಕೆ ಬದ್ಧರಾಗಿರಲು ಒಪ್ಪಿರುತ್ತೀರಿ. ಅಕಸ್ಮಾತ್ ನೀವು ಈ ನಿಯಮಗಳನ್ನು ಒಪ್ಪದಿದ್ದರೆ, ದಯವಿಟ್ಟು ಈ ಜಾಲತಾಣದ ಬಳಕೆಯಿಂದ ದೂರವಿರಿ.

 

೧. ಒಪ್ಪಂದದ ಅಂಗೀಕಾರ

ಈ ಜಾಲತಾಣವನ್ನು ಪ್ರವೇಶಿಸುವ ಮೂಲಕ, ನೀವು ಈ ಜಾಲತಾಣದ ಬಳಕೆಯ ನಿಯಮಗಳನ್ನು ಓದಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ ಮತ್ತು ಅದು ಕಾನೂನುಬದ್ಧವಾಗಿ ನಿಮಗೆ ಅನ್ವಯವಾಗುತ್ತದೆ ಎಂದು ದೃಢೀಕರಿಸುತ್ತೀರಿ. ಈ ಒಪ್ಪಂದವು ಈ ಜಾಲತಾಣವನ್ನು ಭೇಟಿ ಮಾಡುವ ಎಲ್ಲಾ ಸಂದರ್ಶಕರು, ಬಳಕೆದಾರರು ಹಾಗೂ ಇತರರಿಗೂ ಅನ್ವಯಿಸುತ್ತದೆ. ನೀವು ಈ ನಿಯಮಗಳನ್ನು ಒಪ್ಪದಿದ್ದರೆ, ದಯವಿಟ್ಟು ಈ ಜಾಲತಾಣವನ್ನು ಬಳಸಬೇಡಿ. ಯಾವುದೇ ಸಮಯದಲ್ಲಿ ಈ ನಿಯಮಗಳನ್ನು ನಾವು ಪರಿಷ್ಕರಿಸುವ ಹಕ್ಕನ್ನುಕಾಯ್ದಿರಿಸಿದ್ದೇವೆ ಮತ್ತು ಈ ಬದಲಾವಣೆಗಳನ್ನು ಮಾಡಿದ ನಂತರ ನೀವು ಜಾಲತಾಣದ ಬಳಕೆಯನ್ನು ಮುಂದುವರಿಸಿದರೆ, ನಮ್ಮ ಪರಿಷ್ಕೃತ ನಿಯಮಗಳಿಗೆ ನಿಮ್ಮ ಒಪ್ಪಿಗೆ ಇದೆ ಎಂದು ತಿಳಿಯಲಾಗುತ್ತದೆ.

 

೨.ಲೋಗೋಗಳು, ಟ್ರೇಡ್‌ ಮಾರ್ಕ್ ಗಳು

ಈ ಜಾಲತಾಣದಲ್ಲಿರುವ ಲೋಗೋಗಳು, ಟ್ರೇಡ್‌ಮಾರ್ಕ್ ಗಳು ಮತ್ತು ಚಿತ್ರಮಾಹಿತಿಗಳು vishwakannadigaru.com  ತಾಣದ ಬೌದ್ಧಿಕವಾದ ಸ್ವತ್ತುಗಳಾಗಿವೆ.  ಇದರಲ್ಲಿ ಮೂರನೇ ವ್ಯಕ್ತಿಗಳ ಮಾಲೀಕತ್ವದ ಟ್ರೇಡ್‌ಮಾರ್ಕ್ ಗಳು ಸಹ ಒಳಗೊಂಡಿರಬಹುದು. ಹಾಗಾಗಿ ಆಯಾ ಮಾಲೀಕರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯದೆ, ವ್ಯಾವಹಾರಿಕ ಉದ್ದೇಶಗಳಿಗಾಗಿ ಇಲ್ಲಿರುವ ಸ್ವತ್ತುಗಳನ್ನು ಬಳಸುವುದು, ನಕಲು ಮಾಡುವುದು ಇಲ್ಲವೇ ವಿತರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅನಧಿಕೃತ ಬಳಕೆಯು ನಾವು ಕಾನೂನು ಕ್ರಮವನ್ನು ಕೈಗೊಳ್ಳಲು ಕಾರಣವಾಗಬಹುದು ಮತ್ತು ಈ ಕಾನೂನಿನ ಕ್ರಮದಲ್ಲಿ ನಷ್ಟವನ್ನು ಭರಿಸುವ ಕ್ಲೈಮು ಒಳಗೊಂಡಿರುತ್ತದೆ.

 

೩.ವಯಸ್ಸಿನ ನಿರ್ಬಂಧ

ಈ ಒಂದು ಜಾಲತಾಣವು ೧೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಡಲಾಗಿಲ್ಲ. ನೀವು ೧೩ ರಿಂದ ೧೮ ವರ್ಷದ ವಯಸ್ಸಿನವರಾಗಿದ್ದರೆ, ನೀವು ಪೋಷಕರ ಒಪ್ಪಿಗೆ ಮತ್ತು ಅವರ ಮೇಲ್ವಿಚಾರಣೆಯೊಂದಿಗೆ ಮಾತ್ರ ಈ ಜಾಲತಾಣದ ಬಳಕೆ ಮಾಡಬಹುದು. ಈ ಜಾಲತಾಣವನ್ನು ಬಳಸುವ ಮೂಲಕ, ನೀವು ವಯಸ್ಸಿನ ನಿಯಮಕ್ಕೆ ಬದ್ದರಾಗಿರುತ್ತೀರಿ ಮತ್ತು ನೀವು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ನೀವು ಪೋಷಕರು ಅಥವಾ ಜೊತೆಗಿರುವ ರಕ್ಷಕರ ಒಪ್ಪಿಗೆಯನ್ನು ಹೊಂದಿದ್ದೀರಿ ಎಂದು ನಾವು ಅರಿಯಬಹುದು. ಯಾವುದೇ ಸಮಯದಲ್ಲಿ ನಿಮ್ಮ ವಯಸ್ಸನ್ನು ನಾವು ಪರಿಶೀಲಿಸಬಹುದು. ಅಕಸ್ಮಾತ್ ನೀವು ತಪ್ಪು ಮಾಹಿತಿ ನೀಡಿದ್ದರೆ, ಜಾಲತಾಣಕ್ಕೆ ನೀವು ಭೇಟಿ ನೀಡುವುದನ್ನು ನಿರ್ಬಂಧಿಸಲಾಗುವುದು. 

 

೪.ಪ್ರವೇಶ

vishwakannadigaru.com ತನ್ನ ಜಾಲತಾಣವನ್ನು ಇದರಲ್ಲಿ ಒದಗಿಸಿದ ಸೇವೆಗಳನ್ನು ಮತ್ತು ವಸ್ತುಗಳನ್ನು ತಮ್ಮ ವಿವೇಚನೆಯಿಂದ ಬಳಕೆದಾರರಿಗೆ ಯಾವುದೇ ಸೂಚನೆ ನೀಡದೆ ಹಿಂತೆಗೆದುಕೊಳ್ಳುವ ಅಥವಾ ತಿದ್ದುಪಡಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತದೆ. ಅಕಸ್ಮಾತ್ ಈ ಜಾಲತಾಣದ ಯಾವುದೇ ಮಾಹಿತಿಗಳು ಯಾವುದೋ ಕಾರಣಕ್ಕೆ ಇನ್ಯಾವುದೋ ವಿಚಾರಕ್ಕೆ ಲಭ್ಯವಾಗದಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಕೆಲವೊಮ್ಮೆ ಸಿಸ್ಟಮ್‌ನ ವೈಫಲ್ಯ, ತಾಂತ್ರಿಕ ಸಮಸ್ಯೆ ಇಲ್ಲವೇ ಅಸಮರ್ಪಕ ನಿರ್ವಹಣೆಯಾದರೆ, ಈ ಜಾಲತಾಣಕ್ಕೆ ಭೇಟಿ ನೀಡುವುದನ್ನು ಯಾವುದೇ ಪೂರ್ವ ಸೂಚನೆ ನೀಡದೇ ನಿರ್ಬಂಧಿಸಲಾಗುವುದು. 

 

೫. ಹಕ್ಕುಸ್ವಾಮ್ಯ

ನಮ್ಮ ಮಾಹಿತಿ, ಸಂಸ್ಥೆ, ಗ್ರಾಫಿಕ್ಸ್ ಹಾಗೂ ಜಾಲತಾಣದ ವಿನ್ಯಾಸವು ಹಕ್ಕುಸ್ವಾಮ್ಯದ ಕಾನೂನುಗಳು ಹಾಗೂ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಸಂರಕ್ಷಿತವಾಗಿದೆ. ಇದರ ಎಲ್ಲಾ ಹಕ್ಕುಗಳನ್ನು vishwakannadigaru.com  ಜಾಲತಾಣಕ್ಕೆ ಕಾಯ್ದಿರಿಸಲಾಗಿದೆ. ಹಾಗಾಗಿ ನೀವು ಪೂರ್ವ ಲಿಖಿತ ಅನುಮತಿಯಿಲ್ಲದೆ ತಾಣದ ಯಾವುದೇ ವಿಷಯವನ್ನು ಮತ್ತೆ ತಿಳಿಸುವುದು,  ಹಂಚುವುದು, ಪರಿಷ್ಕರಿಸುವುದು, ಪುನರ್ ಉತ್ಪನ್ನವಾಗಿ ಮಾರ್ಪಡಿಸುವುದು. ಈ ರೀತಿಯ ಯಾವುದೇ ಚಟುವಟಿಕೆಗಳನ್ನು ಮಾಡುವಂತಿಲ್ಲ. ಅಕಸ್ಮಾತ್ ಅನಧಿಕೃತವಾಗಿ ಬಳಕೆ ಮಾಡಿದರೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಾಗುವುದು.

 

೬. ಸೇವೆಯ ಗುರುತುಗಳು

ನಮ್ಮ ಜಾಲತಾಣದಲ್ಲಿ ಬಳಸಲಾದ ಎಲ್ಲಾ ಸೇವಾ ಗುರುತುಗಳು, ಲೋಗೋಗಳು ಮತ್ತು ವ್ಯಾವಹಾರಿಕ ಹೆಸರುಗಳು ಎಲ್ಲವೂ vishwakannadigaru.com ನ ಮಾಲೀಕತ್ವಕ್ಕೆ ಒಳಪಟ್ಟಿರುತ್ತವೆ. ಹಾಗಾಗಿ ಇಲ್ಲಿರುವ ಮಾಹಿತಿಯನ್ನು ಯಾವುದೇ ಅನುಮತಿಯಿಲ್ಲದೇ ಬಳಸುವಂತಿಲ್ಲ. ಅನಧಿಕೃತವಾಗಿ ನಮ್ಮ ಸೇವಾ ಗುರುತುಗಳು ಮತ್ತು ವ್ಯಾವಹಾರಿಕ ಒಪ್ಪಂದಕ್ಕೆ ಒಳಪಟ್ಟಿರುವುದನ್ನು ಬಳಸಿಕೊಂಡರೆ, ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

 

೭. ಸೀಮಿತ ಪರವಾನಗಿ; ಅನುಮತಿಯಿದ್ದಷ್ಟೇ ಬಳಕೆ 

ನೀವು ಈ ಎಲ್ಲ ನಿಯಮಗಳಿಗೆ ಬದ್ದರಾಗಿ ಅನುಸರಣೆಗೆ ಒಳಪಟ್ಟರೆ, ಈ ಜಾಲತಾಣವನ್ನು ಪ್ರವೇಶಿಸಲು ಮತ್ತು ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗಾಗಿ ಮಾತ್ರ ವಿಷಯವನ್ನು ವೀಕ್ಷಿಸಲು ನಾವು ನಿಮಗೆ ಸೀಮಿತ, ಹಿಂಪಡೆಯಬಹುದಾದ, ವಿಶೇಷವಲ್ಲದ ಮತ್ತು ವರ್ಗಾಯಿಸಲಾಗದ ಪರವಾನಗಿಯನ್ನು ನೀಡುತ್ತೇವೆ. ಈ ನಿಯಮಗಳ ವಿರುದ್ಧವಾಗಿ,  ಕಾನೂನುಬಾಹಿರ ಅಥವಾ ನಿಷೇಧಿಸಲ್ಪಟ್ಟ ಯಾವುದೇ ಉದ್ದೇಶಕ್ಕಾಗಿ ಈ ಜಾಲತಾಣವನ್ನು ಬಳಸದಿರಲು ನೀವು ಒಪ್ಪಿರುತ್ತೀರಿ.   ಈ ಪರವಾನಗಿಯು ಜಾಲತಾಣದ ಯಾವುದೇ ಮಾಹಿತಿಯ ಮರುಮಾರಾಟ ಅಥವಾ ವ್ಯಾವಹಾರಿಕ ಉದ್ದೇಶವನ್ನು ಒಳಗೊಂಡಿಲ್ಲ.

 

೮. ಬಳಕೆಯ ಮೇಲಿನ ನಿರ್ಬಂಧಗಳು ಮತ್ತು ನಿಷೇಧಗಳು

ನೀವು ಈ ಜಾಲತಾಣವನ್ನು ಕಾನೂನುಬದ್ಧ ಉದ್ದೇಶಗಳಿಗಾಗಿ ಮಾತ್ರ ಬಳಸಲು ಒಪ್ಪುತ್ತೀರಿ. ನೀವು ಮಾಡಬಾರದ ಸಂಗತಿಗಳೆಂದರೆ, 

• ಬೇರೆಯವರ ಮಾನಹಾನಿಗೆ ಈಡು ಮಾಡುವ ಅಶ್ಲೀಲ, ನಿಂದನೆ ಇಲ್ಲವೇ ಆಕ್ಷೇಪಾರ್ಹ ಮಾಹಿತಿಗಳನ್ನು ನೀಡುವುದು. 

• ಯಾವುದಾದರೂ ಸ್ವಯಂಚಾಲಿತ ಸಿಸ್ಟಂ ಅಂದರೆ ರೊಬೊಟ್, ಸ್ಪೈಡರ್ಗಳು, ಆಫ್‌ಲೈನ್ ರೀಡರ್ಸ್ಗಳ ಮೂಲಕ ನಮ್ಮ ಅನುಮತಿಯಿಲ್ಲದೆ ನಮ್ಮ ಜಾಲತಾಣವನ್ನು ಪ್ರವೇಶಿಸುವುದು.

• ಜಾಲತಾಣದ ಯಾವುದೇ ಭಾಗಕ್ಕೆ ಇಲ್ಲವೇ ತಾಣಕ್ಕೆ ಹೊಂದಿಕೊಂಡಿರುವ ಸಿಸ್ಟಂಗಳು ಅಥವಾ ನೆಟ್ವರ್ಕ್ಗಳಿಗೆ ಅನಧಿಕೃತವಾಗಿ ಪ್ರವೇಶಿಸಲು ಪ್ರಯತ್ನಿಸುವುದು. 

• ನಮ್ಮ ಜಾಲತಾಣವನ್ನು ಅದರ ಸರ್ವರ್‌ಗಳನ್ನು ಅಥವಾ ಅದನ್ನು ಪರಿಚಯಿಸುವ ನೆಟ್‌ವರ್ಕ್ಗಳನ್ನು ನಿರ್ಬಂಧಿಸುವ ರೀತಿಯ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು.

 

೯. ಜಾಲತಾಣದ ಸಂಪರ್ಕ

ನೀವು ನ್ಯಾಯಯುತ ಮತ್ತು ಕಾನೂನುಬದ್ಧ ರೀತಿಯಲ್ಲಿ, ನಮ್ಮ ಘನತೆಗೆ ತೊಂದರೆ ಆಗದಂತೆ ನಮ್ಮ ಜಾಲತಾಣದ ಮುಖಪುಟದ ಸಂಪರ್ಕ ಮಾಡಬಹುದು. ಆದಾಗ್ಯೂ vishwakannadigaru.com ನ ಜೊತೆ ಸಹಯೋಗ, ಅನುಮೋದನೆ, ಜಾಹೀರಾತು ಇವುಗಳನ್ನು ಒಳಗೊಂಡ ಯಾವುದೇ ರೀತಿಯ ಸಂಪರ್ಕವನ್ನು ಸಾಧಿಸಲು ಆಗುವುದಿಲ್ಲ. ನಮಗೆ ಯಾವುದೇ ಪೂರ್ವ ಸೂಚನೆ ನೀಡದೇ ನಿಮ್ಮ ಸಂಪರ್ಕವನ್ನು ತೆಗೆದು ಹಾಕುವ ಅಧಿಕಾರವಿರುತ್ತದೆ.

 

೧೦. ಜಾಹೀರಾತುದಾರರು

ನಮ್ಮ ಜಾಲತಾಣವು ಕೆಲವೊಮ್ಮೆ ಮೂರನೇ ವ್ಯಕ್ತಿಗಳ ಜಾಹೀರಾತುಗಳನ್ನು ಹೊಂದಿರಬಹುದು. ಹೀಗೆ ಜಾಹೀರಾತು ಮಾಡಲ್ಪಟ್ಟ ಯಾವುದೇ ಉತ್ಪನ್ನಗಳು ಅಥವಾ ಅವರ ಸೇವೆಗಳನ್ನು ನಾವು ಅನುಮೋದಿಸುವುದಿಲ್ಲ, ಜೊತೆಗೆ ಈ ಜಾಹೀರಾತುಗಳಲ್ಲಿನ ವಿಷಯದ ನಿಖರತೆಗೆ ನಾವು ಜವಾಬ್ದಾರರಾಗಿರುವುದಿಲ್ಲ. ಅಕಸ್ಮಾತ್ ಈ ಜಾಲತಾಣದಲ್ಲಿ ಕಂಡುಬರುವ ಜಾಹೀರಾತುದಾರರೊಂದಿಗೆ ನೀವು ವ್ಯವಹಾರವನ್ನು ಹೊಂದಿದ್ದರೆ, ಅದು ನಿಮ್ಮ ಮತ್ತು ಅವರ ನಡುವೆ ಮಾತ್ರ ಸೀಮಿತವಾಗಿರುತ್ತದೆ. ನಿಮ್ಮ ವ್ಯವಹಾರಗಳಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ನಾವು ಜವಾಬ್ದಾರರಾಗಿರುವುದಿಲ್ಲ.

 

೧೧. ನೋಂದಣಿ

ಈ ಜಾಲತಾಣದಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಬಳಸಲು ಇಚ್ಛೆಪಟ್ಟರೆ ಅದಕ್ಕೆ ನೋಂದಣಿ ಅವಶ್ಯಕವಾಗಿರುತ್ತದೆ. ನೋಂದಣಿ ಮಾಡುವ ಮೂಲಕ ನೀವು ಕೆಳಕಂಡ ವಿಚಾರಗಳಿಗೆ ಸಹಮತ ನೀಡುತ್ತಿದ್ದೀರಿ.

• ನಿಖರ, ಪ್ರಸ್ತುತ ಹಾಗೂ ಸಂಪೂರ್ಣವಾದ ಮಾಹಿತಿಯನ್ನು ಒದಗಿಸುವುದು.

• ನಿಮ್ಮ ನೋಂದಣಿಯ ಮಾಹಿತಿಯನ್ನು ಅತ್ಯಂತ ನಿಖರ, ಪ್ರಸ್ತುತ ಮತ್ತು ಸಂಪೂರ್ಣವಾಗಿಡಲು ಅದರ ನಿರ್ವಹಣೆ ಮತ್ತು ಪ್ರಾಮಾಣಿಕತೆಯಿಂದ ನವೀಕರಿಸಬೇಕು.

• ನಿಮ್ಮ ಪಾಸ್‌ವರ್ಡ್ ಮತ್ತು ಖಾತೆಯ ಸುರಕ್ಷತೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವ   ಜವಾಬ್ದಾರಿ ನಿಮ್ಮದಾಗಿರುತ್ತದೆ.

• ನಿಮ್ಮ ಖಾತೆಯನ್ನು ಅನಧಿಕೃತ ವ್ಯಕ್ತಿಗಳ ದುರ್ಬಳಕೆ ಇಲ್ಲವೇ ಅದರ ಸುರಕ್ಷತೆಯಲ್ಲಿ ಲೋಪ ದೋಷ ಕಂಡುಬಂದರೆ ತಕ್ಷಣವೇ ನಮಗೆ ತಿಳಿಸಿ.

 

೧೨.ಲೋಪದೋಷ, ತಿದ್ದುಪಡಿ ಹಾಗೂ ಬದಲಾವಣೆಗಳು

ನಾವು ನಿಮಗೆ ನಿಖರವಾದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಿರುವಾಗ, ನಮ್ಮ ಜಾಲತಾಣವು ಬೆರಳಚ್ಚು ದೋಷಗಳು, ನಿಖರತೆಯ ಲೋಪಗಳನ್ನು ಹೊಂದಿರಬಹುದು. ಹೀಗಾಗಿ ಈ ಜಾಲತಾಣದಲ್ಲಿರುವ ಎಲ್ಲಾ ದೋಷಗಳನ್ನು ಸರಿಪಡಿಸಲು ಮತ್ತು ಯಾವುದೇ ಸಮಯದಲ್ಲಿ, ನಿಮಗೆ ಪೂರ್ವ ಸೂಚನೆ ನೀಡದೆ ಮಾಹಿತಿಯನ್ನು ಬದಲಾಯಿಸುವ ಅಥವಾ ನವೀಕರಿಸುವ ಹಕ್ಕನ್ನು ನಾವು ಹೊಂದಿರುತ್ತೇವೆ. 

 

೧೩. ಮೂರನೇ ವ್ಯಕ್ತಿಯ ಮಾಹಿತಿ

ಈ ಜಾಲತಾಣವು ಕೆಲವೊಮ್ಮೆ ಮೂರನೇ ವ್ಯಕ್ತಿಯು ನೀಡಲ್ಪಟ್ಟ ಜಾಲತಾಣಗಳ ಸಂಪರ್ಕವನ್ನು ಹೊಂದಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ. ಆದರೆ ನಾವು ಯಾವುದೇ ಕಾರಣಕ್ಕೂ ತಾಣದಲ್ಲಿರುವ ಮೂರನೇ ವ್ಯಕ್ತಿ ಹೊಂದಿರುವ ಮಾಹಿತಿಯನ್ನು ನಿಯಂತ್ರಿಸುವುದಿಲ್ಲ, ಅನುಮೋದಿಸುವುದಿಲ್ಲ. ಅಕಸ್ಮಾತ್ ನಿಮ್ಮ ಬಳಕೆಯಿಂದ ಆಗುವ ಯಾವುದೇ ನಷ್ಟಗಳು ಅಥವಾ ಹಾನಿಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಮೂರನೇ ವ್ಯಕ್ತಿಯ ಮಾಹಿತಿಯಲ್ಲಿ ಪ್ರವೇಶಿಸುವುದು ನೀವು ಅಪಾಯದಲ್ಲಿ ಸಿಲುಕಿದಂತೆ. ಆ ನಿಟ್ಟಿನಲ್ಲಿ ನೀವು ಮೂರನೇ ವ್ಯಕ್ತಿಯ ವೆಬೆಸೈಟ್‌ಗಳ ನಿಯಮಗಳು ಮತ್ತು ಅವರ ಷರತ್ತುಗಳನ್ನು ಪರಿಶೀಲಿಸುವುದು ಒಳಿತು.

 

೧೪. ಕಾನೂನು ಬಾಹಿರ ಚಟುವಟಿಕೆಗಳು

ನಮ್ಮ ಜಾಲತಾಣದ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಅದನ್ನು ತನಿಖೆ ಮಾಡುವ ಸಂಪೂರ್ಣ ಹಕ್ಕನ್ನು ನಾವು ಹೊಂದಿರುತ್ತೇವೆ. ಇದು ನೀವು ಒಪ್ಪಿಕೊಂಡ ನಿಯಮಗಳ ಉಲ್ಲಂಘನೆಗೆ ಒಳಪಟ್ಟು, ಕಾನೂನನ್ನು ದುರ್ಬಳಕೆ ಮಾಡುವ  ಬಳಕೆದಾರರನ್ನು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ನಾವು ಕಾನೂನು ಅಧಿಪತ್ಯಕ್ಕೆ ಒಳಪಟ್ಟಿರುವ ಅಧಿಕಾರಿಗಳೊಂದಿಗೆ ಕೈ ಜೋಡಿಸಬಹುದು.

ಅಕಸ್ಮಾತ್ ನಮ್ಮ ಬಳಕೆದಾರರಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವಿರಿ ಎಂದು ನಾವು ಮನಗಂಡರೆ ಯಾವುದೇ ಸೂಚನೆ ನೀಡದೇ, ತಾಣದ ನಿಮ್ಮ ಪ್ರವೇಶಕ್ಕೆ ನಿರ್ಬಂಧ ಹೇರಬಹುದು.

 

೧೫. ನಷ್ಟಭರ್ತಿ ಒಪ್ಪಂದ

ನೀವು ಈ ಜಾಲತಾಣಕ್ಕೆ, ಅದಕ್ಕೆ ಸಂಬಂಧಿಸಿದ ಅಂಗಸಂಸ್ಥೆಗಳಿಗೆ ಮತ್ತು ಅದರ ಅಧಿಕಾರಿಗಳಿಗೆ ನಿರ್ದೇಶಕರಿಗೆ, ಉದ್ಯೋಗಿಗಳಿಗೆ, ಎಜೆಂಟರುಗಳಿಗೆ ನೀವು ಮಾಡುವ ಬಳಕೆಯಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೀರಿ ಎಂದು ಒಪ್ಪಿರುತ್ತೀರಿ. ಒಂದು ವೇಳೆ ಈ ರೀತಿ ಹಾನಿಯಾದರೆ ಅದರಿಂದ ಉಂಟಾದ ನಷ್ಟವನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಖರ್ಚುಗಳನ್ನು ನೀವು ಭರಿಸುತ್ತೀರಿ ಎಂದು ಒಪ್ಪಿಕೊಂಡಿರುತ್ತೀರಿ. ಈ ಖರ್ಚಿನಲ್ಲಿ ವಕೀಲರ ಖರ್ಚು ಒಳಗೊಂಡಿರುತ್ತದೆ. ಈ ನಿಮ್ಮ ಒಪ್ಪಂದವು ನೀವು ನಮ್ಮ ಜಾಲತಾಣವನ್ನು ಬಳಸುವ ನಿರ್ಬಂಧವಿದ್ದರೂ ಮುಂದುವರೆಯುತ್ತದೆ.

 

೧೬. ವರ್ಗಾವಣೆ ಸಲ್ಲದು

ನಮ್ಮ ಜಾಲತಾಣವನ್ನು ಬಳಸುವ ಸಂಪೂರ್ಣ ಹಕ್ಕು ನಿಮ್ಮ ವೈಯಕ್ತಿಕ ನಿರ್ಧಾರಕ್ಕೆ ಸೇರಿದ್ದಾಗಿದ್ದು, ಅದರ ಬಳಕೆಯನ್ನು ಇತರ ವ್ಯಕ್ತಿಗಳಿಗೆ ನಿಯೋಜಿಸುವ, ವರ್ಗಾವಣೆ ಮಾಡುವ ಹಕ್ಕು ನಿಮ್ಮದಾಗಿರುವುದಿಲ್ಲ. ಅಕಸ್ಮಾತ್ ನಿಮ್ಮ ಹಕ್ಕುಗಳನ್ನು ನಿಯೋಜಿಸಲು ಅಥವಾ ವರ್ಗಾಯಿಸಲು ಪ್ರಯತ್ನಪಟ್ಟರೆ, ನಿಯಮಗಳ ಅಡಿಯಲ್ಲಿ ನಾವು ಅದನ್ನು ಶೂನ್ಯಗೊಳಿಸುವ ಹಾಗೂ ನಿರರ್ಥಕಗೊಳಿಸಬಹುದಾಗಿದೆ.

 

೧೭. ಹಕ್ಕು ನಿರಾಕರಣೆ

ನಮ್ಮ ಜಾಲತಾಣವನ್ನು 'ಇರುವಂತೆ' ಮತ್ತು 'ಲಭ್ಯವಿರುವ' ಆಧಾರದ ಮೇಲೆ ರಚಿಸಲಾಗಿದ್ದು ಅದರಂತೆ ಸೇವೆಯನ್ನು ನೀಡಲಾಗುತ್ತಿದೆ. vishwakannadigaru.com  ತಾಣವು ಯಾವುದೇ ರೀತಿಯ ಖಾತರಿಯನ್ನು, ಪ್ರಾತಿನಿಧ್ಯವನ್ನು ಹೊಂದಿರುವುದಿಲ್ಲ. ಹಾಗಾಗಿ ಇಲ್ಲಿರುವ ಮಾಹಿತಿ, ವಿಷಯ ವಸ್ತುಗಳು ಅಥವಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಲಾದ ಮಾಹಿತಿಗಳಿಗೆ ನಾವು ಜವಾಬ್ದಾರಿಯಾಗಿರುವುದಿಲ್ಲ. ಹಾಗಾಗಿ ನಿಮ್ಮ ಸ್ವಂತ ನಿರ್ಧಾರದಂತೆ ನೀವು ಜಾಲತಾಣವನ್ನು ಬಳಸುತ್ತಿರುತ್ತೀರಿ ಎಂಬುದು ನೆನಪಿರಲಿ.

 

೧೮. ಸೀಮಿತ ಹೊಣೆಗಾರಿಕೆ

ಅನ್ವಯವಾಗುವ ಕಾನೂನಿನಲ್ಲಿ ಗರಿಷ್ಠ ಮಟ್ಟಿಗಿನ ಪರಿಧಿಯಲ್ಲಿ ಒಳಪಟ್ಟಿರುವ vishwakannadigaru.com  ಜಾಲತಾಣವು ತನ್ನ ಬಳಕೆಯಿಂದಾಗುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಪರೋಕ್ಷ, ಪ್ರಾಸಂಗಿಕ, ವಿಶೇಷ, ಪರಿಣಾಮವಾಗಿ ಅಥವಾ ದಂಡನಾತ್ಮಕ ಹಾನಿಗಳಿಗೆ ಜವಾಬ್ದಾರರಾಗಿರುವುದಿಲ್ಲ. ಇದರಲ್ಲಿ ಲಾಭನಷ್ಟ, ಮಾಹಿತಿ ಸೋರಿಕೆ, ಅಪಕೀರ್ತಿ, ತಿಳಿಸಲಾಗದ ವಿಚಾರಗಳು ಸೇರಿಕೊಂಡಿರುತ್ತವೆ. 

 

೧೯. ಮಾಹಿತಿಯ ಬಳಕೆ

ಈ ಜಾಲತಾಣವನ್ನು ಬಳಸುವ ಮೂಲಕ, ನಮ್ಮ ಗೌಪ್ಯತೆಯ ನೀತಿಗೆ ಅನುಗುಣವಾಗಿ ನಿಮ್ಮ ಮಾಹಿತಿಯ ಸಂಗ್ರಹಣೆ ಮತ್ತು ಬಳಕೆಗೆ ನೀವು ಸಮ್ಮತಿಸುತ್ತೀರಿ. ಇದರಿಂದ ನಮ್ಮ ಸೇವೆಗಳನ್ನು ಸುಧಾರಿಸಲು, ನಿಮ್ಮೊಂದಿಗೆ ಸಂವಹನ ಮಾಡಲು, ನಿಮ್ಮ ಮನವಿಗಳನ್ನು ಪೂರೈಸಲು ನಿಮ್ಮ ಮಾಹಿತಿಯನ್ನು ನಾವು ಬಳಸಬಹುದು. ನೀವು ಒದಗಿಸುವ ಯಾವುದೇ ಮಾಹಿತಿಯನ್ನು ನಮ್ಮ ಗೌಪ್ಯತೆಯ ನೀತಿಗೆ ಅನುಗುಣವಾಗಿ ಬಳಸಬಹುದು ಎಂದು ನೀವು ಒಪ್ಪಿಕೊಂಡಿರುತ್ತೀರಿ. 

 

೨೦. ಮೂರನೇ ವ್ಯಕ್ತಿಯ ಸೇವೆಗಳು

ಈ ಜಾಲತಾಣವು ಮೂರನೇ ವ್ಯಕ್ತಿಯು ನೀಡುವ ಸೇವೆಗಳು ಅಥವಾ ವಿಷಯಗಳನ್ನು ಒಳಗೊಂಡಿರಬಹುದು. ಆದರೆ ಈ ಮೂರನೇ ವ್ಯಕ್ತಿಯ ಸೇವೆಗಳ ಲಭ್ಯತೆ, ವಿಷಯ ಅಥವಾ ಅಭ್ಯಾಸಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಮೂರನೇ ವ್ಯಕ್ತಿಯ ಜೊತೆಗಿನ ನಿಮ್ಮ ಸಂವಾದಗಳನ್ನು ಅವರು ಅವರಿಗೆ ಸಂಬಂಧಿತ ನಿಯಮಗಳು ಮತ್ತು ಗೌಪ್ಯತೆಯ ನೀತಿಗಳಿಂದ ನಿಯಂತ್ರಿಸುತ್ತಾರೆ. 

 

೨೧. ಖಾಸಗಿ ನೀತಿ

ಈ ಜಾಲತಾಣದ ನಿಮ್ಮ ಬಳಕೆಯು ನಮ್ಮ ಗೌಪ್ಯತೆಯ ನೀತಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಸಂಗ್ರಹಿಸುತ್ತೇವೆ, ಬಳಸುತ್ತೇವೆ ಮತ್ತು ರಕ್ಷಿಸುತ್ತೇವೆ ಎಂಬುದನ್ನು ವಿವರಿಸುತ್ತದೆ. ಈ ಜಾಲತಾಣವನ್ನು ಬಳಸುವ ಮೂಲಕ, ಗೌಪ್ಯತೆ ನೀತಿಗೆ ಅನುಗುಣವಾಗಿ ಮಾಹಿತಿಯ ಸಂಗ್ರಹಣೆ ಮತ್ತು ಬಳಕೆಗೆ ನೀವು ಒಪ್ಪಿರುತ್ತೀರಿ.

 

೨೨. ಹಣ ಪಾವತಿ

ಈ ಜಾಲತಾಣದಲ್ಲಿ ನಡೆಸುವ ಎಲ್ಲಾ ವಹಿವಾಟುಗಳು ನಮ್ಮ ಹಣ ಪಾವತಿ ಪ್ರಕ್ರಿಯೆಯ ನಿಯಮಗಳಿಗೆ ಒಳಪಟ್ಟಿರುತ್ತವೆ. ನಿಖರವಾದ ಬಿಲ್ಲಿಂಗ್ ಮಾಹಿತಿಯನ್ನು ಒದಗಿಸಲು ಮತ್ತು ನಿಮ್ಮ ತಾಣದ ಬಳಕೆಗೆ ಸಂಬಂಧಿಸಿದ ಎಲ್ಲಾ ಶುಲ್ಕಗಳನ್ನು ಪಾವತಿಸಲು ನೀವು ಒಪ್ಪಿಗೆ ಸೂಚಿಸುತ್ತೀರಿ. ನಾವು ನಿಮ್ಮ ಯಾವುದೇ ಆರ್ಡರ್‌ಗಳನ್ನು ಯಾವುದೇ ಕಾರಣಕ್ಕೋಸ್ಕರವಾಗಿಯೂ ತಿರಸ್ಕರಿಸುವ, ರದ್ದು ಮಾಡುವ ಹಕ್ಕು ಹೊಂದಿರುತ್ತೇವೆ. ಆ ಕಾರಣಗಳು ಕೇವಲ ಉತ್ಪನ್ನಕ್ಕೆ ಸೀಮಿತವಾಗದೇ, ಸೇವೆಯ ಲಭ್ಯತೆ, ಬೆಲೆಯಲ್ಲಿನ ದೋಷಗಳು ಅಥವಾ ವಂಚನೆ ತಡೆಗಟ್ಟುವಿಕೆಯನ್ನು ಒಳಗೊಂಡಿರುತ್ತದೆ.  

 

೨೩. ಮಾಹಿತಿಯ ಮೇಲೆ ನಂಬಿಕೆ

ಈ ಜಾಲತಾಣದಲ್ಲಿ ಪ್ರಸ್ತುತಪಡಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಮೀಸಲಾಗಿರುತ್ತದೆ. ನಾವು ನಿಖರವಾದ ಮತ್ತು ಸಮಯೋಚಿತ ಮಾಹಿತಿಯನ್ನು ಒದಗಿಸಲು ನಾವು ಪ್ರಯತ್ನಿಸುತ್ತಿರುವಾಗ, ಈ ಜಾಲತಾಣದಲ್ಲಿರುವ ಯಾವುದೇ ಮಾಹಿತಿಯ ನಿಖರತೆ, ಸಂಪೂರ್ಣತೆ ಅಥವಾ ಉಪಯುಕ್ತತೆಯ ಕುರಿತಾಗಿ ನಾವು ಗ್ಯಾರಂಟಿ ನೀಡಲಾಗುವುದಿಲ್ಲ. ಹಾಗಾಗಿ ಯಾವುದೇ ಮಾಹಿತಿಯನ್ನು ಅವಲಂಬಿಸುವ ಮೊದಲು ನೀವು ಅದನ್ನು ಸರಿಯಾಗಿ ಪರಿಶೀಲಿಸಬೇಕು.

 

೨೪. ಉಳಿದ ಜಾಲತಾಣಗಳಿಗೆ ಸಂಪರ್ಕ 

vishwakannadigaru.com  ಜಾಲತಾಣದಲ್ಲಿ ಅದರ ವೇದಿಕೆಯ ಒಡೆತನದಲ್ಲಿ ಇಲ್ಲದ ಅಥವಾ ನಿಯಂತ್ರಣದಲ್ಲಿ ಇಲ್ಲದ ಅನೇಕ ಜಾಲತಾಣಗಳ ಸಂಪರ್ಕವಿರಬಹುದು, ಜೊತೆಗೆ ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರಬಹುದು. ಈ ವೆಬ್‌ಸೈಟ್‌ಗಳ ವಿಷಯ, ಗೌಪ್ಯತೆ ನೀತಿಗಳು ಅಥವಾ ಅಭ್ಯಾಸಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ನೀವು ಭೇಟಿ ನೀಡುವ ಯಾವುದೇ ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳ ನಿಯಮಗಳು ಮತ್ತು ಗೌಪ್ಯತೆ ನೀತಿಗಳನ್ನು ಪರಿಶೀಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

 

೨೫. ಹಕ್ಕುಸ್ವಾಮ್ಯ ಮತ್ತು ಹಕ್ಕುಸ್ವಾಮ್ಯದ ಎಜೆಂಟರು

ಈ ಜಾಲತಾಣದಲ್ಲಿರುವ ಯಾವುದೇ ಮಾಹಿತಿಯು ನಿಮ್ಮ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುತ್ತದೆ ಎಂದು ನಿಮಗೆ ಅನಿಸಿದರೆ, ಕೂಡಲೇ ನಿಮ್ಮ ಹೆಸರು, ವಿಳಾಸ ಮತ್ತು ಉಲ್ಲಂಘನೆಯ ವಿವರವಾದ ಟಿಪ್ಪಣೆಯೊಂದಿಗೆ ನಮ್ಮನ್ನು ಸಂಪರ್ಕಿಸಿ. ಇದಕ್ಕೆ ಅನ್ವಯವಾಗುವ ಕಾನೂನುಗಳ ಅನುಸಾರವಾಗಿ ಹಕ್ಕುಸ್ವಾಮ್ಯ ಉಲ್ಲಂಘನೆಯ ಮಾನ್ಯವಾದ ಹಕ್ಕುಗಳಿಗೆ ನಾವು ತ್ವರಿತವಾಗಿ ಸ್ಪಂದಿಸುತ್ತೇವೆ.

 

೨೬. ಮಾಹಿತಿ ಮತ್ತು ಮಾಧ್ಯಮ ಪ್ರಕಟಣೆ

vishwakannadigaru.com  ಜಾಲತಾಣಕ್ಕೆ ಸಂಬಂಧಿಸಿದ ಇತರ ಮಾಹಿತಿಗಳು ಮತ್ತು ಪತ್ರಿಕಾ ಪ್ರಕಟಣೆಗಳನ್ನು ಈ ಜಾಲತಾಣವು ಹೊಂದಿರುತ್ತದೆ.   ವಿಷಯದ ನಿಖರತೆಗಾಗಿ ನಾವು ಪ್ರಯತ್ನಿಸುತ್ತಿರುವಾಗ ಕೆಲವೊಮ್ಮೆ ಮಾಹಿತಿಯು ನಿರಂತರವಾಗಿ ನವೀಕರಣಗೊಂಡಿಲ್ಲದೇ ಇರಬಹುದು ಮತ್ತು ಅಂತಹ ಸಮಯದಲ್ಲಿ ನಿಖರತೆ, ಪರಿಪೂರ್ಣತೆಯ ಬಗ್ಗೆ ನಾವು ಗ್ಯಾರೆಂಟಿ ನೀಡುವುದಿಲ್ಲ. ಯಾವುದೇ ಅಭಿಪ್ರಾಯ, ಅನಿಸಿಕೆಗಳನ್ನು ಈ ಒಂದು ಜಾಲತಾಣದಲ್ಲಿ ಪ್ರಕಟಿಸಿದರೆ ಅದು ಕೇವಲ ಲೇಖಕರ ಅಭಿಪ್ರಾಯವಾಗಿದ್ದು, ಅದು ನಮ್ಮ ಅಭಿಪ್ರಾಯವಲ್ಲ.

 

೨೭. ಕಾನೂನಿನ ಪಾಲನೆ

ಈ ಜಾಲತಾಣದ ಬಳಕೆಯನ್ನು ಮಾಡುವಾಗ ಅದಕ್ಕೆ ಪೂರಕವಾಗಿ ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಪಾಲನೆ ಮಾಡಲು ನೀವು ಒಪ್ಪಿರುತ್ತೀರಿ. ಇದರಲ್ಲಿ ಆನ್‌ಲೈನ್ ನಿರ್ವಹಣೆಗೆ ಸಂಬಂಧಿಸಿದ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಅನುಸರಣೆಯೂ ಒಳಗೊಂಡಿದೆ. 

 

ಹಣ ಮರುಪಾವತಿ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳು

•ಪ್ರಿಂಟ್ ಕ್ಯಾಲೆಂಡರ್ ಆರ್ಡರ್‌ಗಳ ಮರುಪಾವತಿಯು ಸ್ವೀಕರಿಸಿದ ಉತ್ಪನ್ನವು ಹಾನಿಗೊಳಗಾಗಿದ್ದರೆ, ದೋಷಪೂರಿತವಾಗಿದ್ದರೆ ಅಂತಹ ಸಂದರ್ಭದಲ್ಲಿ, ಇಲ್ಲವೇ ಉತ್ಪನ್ನದ ವಿವರಣೆಯಲ್ಲಿ ತಿಳಿಸಿದ್ದಕ್ಕಿಂತ ವಿಭಿನ್ನವಾಗಿದ್ದರೆ ಮಾತ್ರ ವಾಪಾಸು ನೀಡಲು ಅರ್ಹವಾಗಿರುತ್ತದೆ.  

•ಮರುಪಾವತಿಯನ್ನು ಪಡೆಯಲು ಬಳಕೆದಾರರು ತಮ್ಮ ಆದೇಶವನ್ನು ಸ್ವೀಕರಿಸಿದ ೧೫ ದಿನಗಳೊಳಗೆ ನಮ್ಮ ಗ್ರಾಹಕ ಸೇವಾ ಘಟಕವನ್ನು ಸಂಪರ್ಕಿಸಬೇಕು. ಖರೀದಿಯ ಪುರಾವೆ ಮತ್ತು ದೋಷ ಅಥವಾ ಸಮಸ್ಯೆಯ ವಿವರಣೆಯನ್ನು ನೀಡಬೇಕು.

•ನಿಮ್ಮ ಮನವಿಯನ್ನು ಯಶಸ್ವಿಯಾಗಿ ಪರಿಶೀಲಿಸಿದ ನಂತರವೇ ಮರುಪಾವತಿಯ ಪ್ರಕ್ರಿಯೆ ಶುರುವಾಗುತ್ತದೆ. ಪಾವತಿಗೆ ಅನುಮೋದನೆ ಸಿಕ್ಕರೆ ೨೦ ವ್ಯಾವಹಾರಿಕ ದಿನಗಳಲ್ಲಿ ಹಣ ಪಾವತಿ ಮಾಡಲಾಗುತ್ತದೆ. ಹಣ ನೀಡುವ ನೀತಿಯಂತೆ ವಾಪಸಾತಿಯ ಸಮಯವೂ ಕೂಡ ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸಬೇಕು.

 

ವಾಪಾಸು ನೀತಿ

•ಪ್ರಿಂಟ್ ಕ್ಯಾಲೆಂಡರ್ ಆರ್ಡರ್‌ಗಳು ಹಾನಿಗೊಂಡಿದ್ದರೆ, ದೋಷಪೂರಿತವಾಗಿದ್ದರೆ, ಅದಲು ಬದಲಾಗಿ ಹೊಂದಾಣಿಕೆ ಇಲ್ಲದಿದ್ದರೆ ಮಾತ್ರ ಸ್ವೀಕರಿಸಲಾಗುವುದು.

•ಡೆಲಿವರಿ ಆದ ಹದಿನೈದು ದಿನದೊಳಗೆ ವಾಪಾಸು ಮನವಿಯನ್ನು ಸಲ್ಲಿಸಬೇಕು. ಮತ್ತು ವಾಪಾಸು ನೀಡುವ ಉತ್ಪನ್ನಗಳು ಮೂಲ ಸ್ವರೂಪದೊಂದಿಗೆ ಪ್ಯಾಕಿಂಗ್ ಆಗಿರಬೇಕು. 

•ವಾಪಾಸು ಮನವಿಯು ಸ್ವೀಕಾರಗೊಂಡರೆ, ಅಂತಿಮವಾಗಿ ಪಡೆಯುವ ನಿಬಂಧನೆಗಳ ಪ್ರಕಾರ ಸಾಗಾಣಿಕೆಯ ವೆಚ್ಚವನ್ನು ಸಾಧ್ಯವಾದರೆ ತಿಳಿಸಲಾಗುವುದು. 

 

ರದ್ದು ನೀತಿ

•ಪ್ರಿಂಟ್ ಕ್ಯಾಲೆಂಡರ್ ಆರ್ಡರ್‌ಗಳನ್ನು ಸಾಗಾಣಿಕೆ ಮಾಡುವ ಮುನ್ನವೇ ರದ್ದುಗೊಳಿಸಲು ಸಾಧ್ಯವಿದೆ.

•ಒಮ್ಮೆ ಸಾಗಾಣಿಕೆಗೆ ಕಳುಹಿಸಿದ ಮೇಲೆ ರದ್ದುಗೊಳಿಸಲು ಸಾಧ್ಯವಿಲ್ಲ, ಅದನ್ನು ಸ್ವೀಕರಿಸಲು ಆಗುವುದಿಲ್ಲ.

•ಅರ್ಹ ರದ್ದತಿಗಳನ್ನು ಮಾತ್ರ ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಬಳಕೆದಾರರು ಇತ್ತೀಚಿನ ಆದೇಶದ ಸ್ಥಿತಿಯೊಂದಿಗೆ ದೃಢೀಕರಣದ ಇಮೇಲನ್ನು ಸ್ವೀಕರಿಸುತ್ತಾರೆ. 

•ರದ್ದತಿ ಕೋರಿದ ಮನವಿಗಳನ್ನು ತಿರಸ್ಕರಿಸುವ ಹಕ್ಕನ್ನು ನಾವು ಹೊಂದಿದ್ದು ಈ ಮೇಲಿನ ನಿಬಂಧನೆಗಳನ್ನು ಅನುಸರಿಸಲಾಗುವುದಿಲ್ಲ.

 

ಪ್ರಿಂಟ್ ಕ್ಯಾಲೆಂಡರ್ ಆರ್ಡರ್‌ಗಳಿಗಿರುವ ನಿಯಮಗಳು ಮತ್ತು ಷರತ್ತುಗಳು

ಉತ್ಪನ್ನ ವಿವರಣೆ: ಪ್ರಿಂಟ್ ಕ್ಯಾಲೆಂಡರ್ ಆರ್ಡರ್‌ಗಳು ನಮ್ಮ ಲಭ್ಯತೆಗೆ ಒಳಪಟ್ಟಿರುತ್ತವೆ ಮತ್ತು ಯಾವುದೇ ಪೂರ್ವ ಸೂಚನೆ ಇಲ್ಲದೆ ಉತ್ಪನ್ನಗಳನ್ನು ಮಾರ್ಪಡಿಸುವ ಅಥವಾ ನಿಲ್ಲಿಸುವ ಹಕ್ಕನ್ನು vishwakannadigaru.com  ತಾಣವು ಹೊಂದಿರುತ್ತದೆ. 

ಆರ್ಡರ್ ಸ್ವೀಕಾರ: ನಮ್ಮ ತಾಣದಲ್ಲಿನ ಆದೇಶದ ಸಂಪೂರ್ಣತೆಯು ಸ್ವೀಕೃತಿಯನ್ನು ಒಳಗೊಂಡಿರುವುದಿಲ್ಲ. ಸಾಗಾಣಿಕೆಯ ಅಧಿಸೂಚನೆಯು ಸಿಕ್ಕ ಮೇಲೆಯೇ ಆದೇಶಗಳನ್ನು ದೃಢೀಕರಿಸಲಾಗುತ್ತದೆ.

ಅರ್ಹತೆ: ಗ್ರಾಹಕರು ೧೮ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು, ತಮ್ಮ ಆರ್ಡರ್‌ ಅನ್ನು ಮಾಡುವಾಗ ನಿಖರವಾದ, ಪ್ರಸ್ತುತ ಮತ್ತು ಸಂಪೂರ್ಣ ಮಾಹಿತಿಯನ್ನು ಒದಗಿಸಲು ಒಪ್ಪಿಕೊಳ್ಳಬೇಕು.

 

ತೆರಿಗೆಗಳು

•ಅನ್ವಯವಾಗುವ ತೆರಿಗೆಗಳು: vishwakannadigaru.com  ತಾಣದಲ್ಲಿ ನಮೂದಿಸಲ್ಪಟ್ಟ ಎಲ್ಲಾ ಬೆಲೆಗಳು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿವೆ. ಯಾವಾಗ ತಲುಪಬೇಕಾದ ವಿಳಾಸವನ್ನು ನೀಡಿದ ನಂತರವೇ ಚೆಕ್‌ಔಟ್‌ನಲ್ಲಿ ತೆರಿಗೆಗಳನ್ನು ಲೆಕ್ಕ ಹಾಕಲಾಗುತ್ತದೆ.

ಗ್ರಾಹಕರ ಜವಾಬ್ದಾರಿ: ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ತೆರಿಗೆ ಕಾನೂನುಗಳ ಅನುಸಾರವಾಗಿ ಗ್ರಾಹಕರು ತಮ್ಮ ಖರೀದಿಗೆ ಸಂಬಂಧಿಸಿದ ಎಲ್ಲಾ ಮಾರಾಟ, ಬಳಕೆ ಮತ್ತು ಅದಕ್ಕೆ ಒಳಪಡುವ ಇತರ ತೆರಿಗೆಗಳಿಗೆ ಜವಾಬ್ದಾರರಾಗಿರುತ್ತಾರೆ.

ಶಿಪ್ಪಿಂಗ್: ನಾವು ಪ್ರಿಂಟ್ ಕ್ಯಾಲೆಂಡರ್‌ಗಳ ಎಲ್ಲಾ ಆರ್ಡರ್‌ಗಳನ್ನು ೫ ವ್ಯವಹಾರ ದಿನಗಳಲ್ಲಿ ತಲುಪಿಸುವ ಗುರಿಯನ್ನು ಹೊಂದಿದ್ದೇವೆ. ಸಾಗಾಣಿಕೆಯ ಟೈಮ್‌ಲೈನ್‌ಗಳು ಕೆಲವೊಮ್ಮೆ ತಲುಪಬೇಕಾದ ಅಂತಿಮ ಸ್ಥಳ ಮತ್ತು ಸಾಗಾಣಿಕೆಯ ಆಯ್ಕೆ ಮೇರೆಗೆ ಏರಿಳಿತವನ್ನು ಹೊಂದಿರುತ್ತವೆ. 

ವಿತರಣಾ ಸಮಯಗಳು: ತಾಣದಲ್ಲಿ ಒಮ್ಮೆ ಬುಕ್ ಆದ ಸಮಯದಲ್ಲಿ ಅಂದಾಜು ತಲುಪುವ ದಿನವನ್ನು ತಿಳಿಸಲಾಗಿರುತ್ತದೆ. ಆದರೆ ಕೆಲವೊಮ್ಮೆ ಅನಿರೀಕ್ಷಿತ ಸಂದರ್ಭಗಳು, ನಮ್ಮ ಹಿಡಿತವನ್ನು ಮೀರಿದ ಸಾಗಾಣಿಕೆಯ ಸಮಸ್ಯೆಗಳಿಂದಾಗಿ ತಲುಪುವ ದಿನವನ್ನು ಅತ್ಯಂತ ಕರಾರುವಕ್ಕಾಗಿ ತಿಳಿಸಲು ಸಾಧ್ಯವಿಲ್ಲ.

ಶಿಪ್ಪಿಂಗ್ ವೆಚ್ಚಗಳು: ಸಾಗಾಣಿಕಾ ವೆಚ್ಚವು ವಿತರಣಾ ಸ್ಥಳ ಮತ್ತು ಶಿಪ್ಪಿಂಗ್ ವಿಧಾನವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ.

 

ಟೈಟಲ್ ವರ್ಗಾವಣೆ

ನಷ್ಟದ ಅಪಾಯ: ಪ್ರಿಂಟೆಡ್ ಕ್ಯಾಲೆಂಡರ್ ಆರ್ಡರ್ ಗಳ ಎಲ್ಲಾ ಖರೀದಿಗಳನ್ನು ಸಾಗಾಣಿಕೆ  ಒಪ್ಪಂದದ ಅನುಸಾರವಾಗಿ ಮಾಡಲಾಗುತ್ತದೆ. ನಾವು ಆರ್ಡರ್ ಗಳನ್ನು ಗ್ರಾಹಕರಿಗೆ ತಲುಪಿಸಿದ ನಂತರ ನಷ್ಟದ ಅಪಾಯ ಮತ್ತು ಐಟಂಗಳ ಶೀರ್ಷಿಕೆಯು ಗ್ರಾಹಕರಿಗೆ ಅನ್ವಯವಾಗುತ್ತದೆ.

ವಿತರಣಾ ದೃಢೀಕರಣ: ಆರ್ಡರ್ ಮಾಡಿದ ವಸ್ತುವನ್ನು ವಾಹನದ ಮೂಲಕ ತಲುಪಿಸಿದ ನಂತರ ಗ್ರಾಹಕರು ಅದರ ಸಂಪೂರ್ಣ ಮಾಲಿಕತ್ವ ಮತ್ತು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದರಲ್ಲಿ ಸಾಗಾಣಿಕೆಯ ಸಮಯದಲ್ಲಿನ ರಿಸ್ಕ್ ಕೂಡ ಸೇರಿಕೊಂಡಿರುತ್ತದೆ.

 

ನಷ್ಟ ತುಂಬಿಕೊಳ್ಳುವಿಕೆ

ಗ್ರಾಹಕ ಒಪ್ಪಂದ: vishwakannadigaru.com  ತಾಣದಲ್ಲಿ ಪ್ರಿಂಟ್ ಕ್ಯಾಲೆಂಡರ್ ಆರ್ಡರ್‌ಗಳನ್ನು ಖರೀದಿಸುವ ಮೂಲಕ ಗ್ರಾಹಕರು vishwakannadigaru.com  ವೇದಿಕೆ ಮತ್ತು ಅದರ ಅಂಗಸಂಸ್ಥೆಗಳು, ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು ಮತ್ತು ಏಜೆಂಟರುಗಳಿಗೆ ಹಾನಿ ಮಾಡಿದರೆ ನಷ್ಟ ತುಂಬಿಕೊಡಲು, ಅವರನ್ನ ರಕ್ಷಿಸಲು, ಯಾವುದೇ ರೀತಿಯ ತೊಂದರೆ ಮಾಡದಿರುವ ನಿಯಮಗಳಿಗೆ ಒಪ್ಪಿಕೊಂಡಿರುತ್ತಾರೆ. ಈ ನಿಯಮಗಳನ್ನು ಮೀರುವುದು ಅಥವಾ ಇನ್ನೊಂದು ಪಾರ್ಟಿಯ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ.

ಮಿತಿಗಳು: ನಮ್ಮ ಸಂಪೂರ್ಣ  ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುಷ್ಕೃತ್ಯದಿಂದ ಉಂಟಾಗುವ ಯಾವುದೇ ಹಾನಿಗಳಿಗೆ ಈ ನಷ್ಟ ಪರಿಹಾರದ ಬಾಧ್ಯತೆ ಅನ್ವಯಿಸುವುದಿಲ್ಲ.

 

ಹಕ್ಕುತ್ಯಾಗದ ವಾರಂಟಿ

ಉತ್ಪನ್ನ ಗ್ಯಾರಂಟಿ: vishwakannadigaru.com  ವೇದಿಕೆಯು ಮುದ್ರಣ ಕ್ಯಾಲೆಂಡರ್ಗಳ ಗುಣಮಟ್ಟ, ಸಂಪೂರ್ಣತೆ ಅಥವಾ ನಿಖರತೆ ಅಥವಾ ತಾಣದಲ್ಲಿ ಒದಗಿಸಲಾದ ಯಾವುದೇ ಉತ್ಪನ್ನ ಅಥವಾ ಸೇವೆಗಳ ಕುರಿತಾಗಿ ತನ್ನ ಪ್ರಾತಿನಿಧ್ಯವನ್ನು ಮತ್ತು ವಾರಂಟಿಯನ್ನು ನೀಡುವುದಿಲ್ಲ.

ತಾಣದ ಲಭ್ಯತೆ: ತಾಂತ್ರಿಕ ದೋಷಗಳು, ವೈರಸ್‌ಗಳು ಅಥವಾ ಇತರ ಅಡಚಣೆಗಳಿಂದ ತಾಣವು ಮುಕ್ತವಾಗಿರುತ್ತದೆ ಎಂಬುದನ್ನು ಖಾತರಿ ನೀಡುವುದಿಲ್ಲ. ಜಾಲತಾಣಕ್ಕೆ ಪ್ರವೇಶವನ್ನು "ಇರುವಂತೆ" ಮತ್ತು "ಲಭ್ಯವಿರುವ" ಆಧಾರದ ಮೇಲೆ ಒದಗಿಸಲಾಗಿದೆ.

ಪರೋಕ್ಷ ವಾರಂಟಿಗಳಿಲ್ಲ: ಎಲ್ಲ ಪರೋಕ್ಷ ವಾರಂಟಿಗಳಲ್ಲಿ ಸೇರಿಕೊಳ್ಳುವ ವ್ಯಾಪಾರೀಕರಣಕ್ಕೆ ಒಳಪಟ್ಟಿರುವ ಸೀಮಿತವಲ್ಲದ ವಾರೆಂಟಿಗಳು, ಉದ್ದೇಶಿತ ಕಾರ್ಯಕ್ಕೆ ಬೇಕಾದ ಫಿಟ್ನೆಸ್ ಅಥವಾ ಉಲ್ಲಂಘನೆ ಮಾಡದಿರುವ ವಾರೆಂಟಿಗಳು ಎಲ್ಲವೂ ಅನ್ವಯವಾಗುವ ಕಾನೂನಿನ ವ್ಯಾಪ್ತಿಯಲ್ಲಿ ನಿರಾಕರಿಸಲ್ಪಟ್ಟಿವೆ.

ಸಾಮಾನ್ಯ ಮಿತಿ: vishwakannadigaru.com  ವೇದಿಕೆಯು ಯಾವುದೇ ಪರೋಕ್ಷ, ಪ್ರಾಸಂಗಿಕ, ದಂಡನಾತ್ಮಕ, ಅಥವಾ ನಮ್ಮ ಉತ್ಪನ್ನಗಳು ಅಥವಾ ವೆಬ್‌ಸೈಟನ್ನು ಬಳಸಲು ಅಸಮರ್ಥತೆಯಿಂದ ಉಂಟಾಗುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಹಾನಿಗಳಿಗೆ ಜವಾಬ್ದಾರನಾಗಿರುವುದಿಲ್ಲ. ಅದು ಲಾಭ ನಷ್ಟ, ಹಾನಿ, ವ್ಯಾವಹಾರಿಕ ತಡೆಗೆ ಸೀಮಿತವಾಗಿಲ್ಲ.

ಗರಿಷ್ಠ ಹೊಣೆಗಾರಿಕೆ: ಯಾವುದೇ ಬಳಕೆದಾರರಿಗೆ ಯಾವುದೇ ಸಂದರ್ಭದಲ್ಲಿ ನಮ್ಮ ಗರಿಷ್ಟ ಹೊಣೆಗಾರಿಕೆಯು ಒಟ್ಟು ಪ್ರಶ್ನೆಯಲ್ಲಿರುವಂತೆ ನಿರ್ದಿಷ್ಟವಾದ ಪ್ರಿಂಟ್ ಕ್ಯಾಲೆಂಡರ್ ಆದೇಶಕ್ಕಾಗಿ ಗ್ರಾಹಕರು ಪಾವತಿಸಿದ ಒಟ್ಟು ಮೊತ್ತಕ್ಕೆ ಸೀಮಿತವಾಗಿರುತ್ತದೆ.

ವಿನಾಯ್ತಿಗಳು: vishwakannadigaru.com ನಿಂದ ಸಂಪೂರ್ಣ  ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುಷ್ಕೃತ್ಯದ ಸಂದರ್ಭಗಳಲ್ಲಿ ಸೀಮಿತ ಹೊಣೆಗಾರಿಕೆಯು ಹೇರಿಕೆಯಾಗದು ಇಲ್ಲವೇ ಕಾನೂನಿನ ಅಡಿಯಲ್ಲಿಯೂ ಹೊಣೆಗಾರಿಕೆಯು ಸೀಮಿತವಾಗುವುದಿಲ್ಲ.

 

ಮಿಶ್ರ ಸಂಗತಿ

ಈ ಬಳಕೆಯ ನಿಯಮಗಳು ಮತ್ತು ನಮ್ಮ vishwakannadigaru.com  ತಾಣದ ನಡುವಿನ ಒಪ್ಪಂದವನ್ನು ಪ್ರತಿನಿಧಿಸುತ್ತವೆ. ಈ ನಿಯಮಗಳು ನಿರ್ಬಂಧನೆಗೆ ಒಳಪಟ್ಟಿದ್ದು ಕಂಡು ಬಂದರೆ, ಉಳಿದ ನಿಬಂಧನೆಗಳು ಪೂರ್ಣ ಪರಿಣಾಮದಲ್ಲಿ ಪರಿಣಾಮಕಾರಿಯಾಗಿ ಮುಂದುವರಿಯುತ್ತವೆ.  ಈ ನಿಯಮಗಳ ಹಕ್ಕು ಅಥವಾ ಅವಕಾಶಗಳನ್ನು ಜಾರಿಗೊಳಿಸಲು ನಮ್ಮ ವೈಫಲ್ಯವು ಅಂತಹ ಹಕ್ಕು ಅಥವಾ ನಿಬಂಧನೆಯ ತೆಗೆಯುವುದನ್ನು ರೂಪಿಸುವುದಿಲ್ಲ. 

 

ಮಧ್ಯಸ್ಥಿಕೆ

ಈ ಜಾಲತಾಣವನ್ನು ಬಳಕೆ ಮಾಡುವಾಗ ಎದುರಾಗುವ ವ್ಯಾಜ್ಯಗಳು ಇಲ್ಲವೇ ಬಳಕೆಯ ನಿಯಮಗಳನ್ನು ಪಾಲನೆ ಮಾಡುವಾಗ ಉಂಟಾಗುವ ವಿವಾದಗಳನ್ನು ಭಾರತೀಯ ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯಿದೆ, ೧೯೯೬ರ ನಿಯಮಗಳಿಗೆ ಅನುಸಾರವಾಗಿ ಪರಿಹರಿಸಲಾಗುತ್ತದೆ. ಈ ಮಧ್ಯಸ್ಥಿಕೆಯು ಬೆಂಗಳೂರಿನಲ್ಲಿ ನಡೆಯುತ್ತದೆ. ಇಲ್ಲಿ ಮಧ್ಯಸ್ಥಗಾರನ ತೀರ್ಮಾನವೇ ಅಂತಿಮವಾಗಿದ್ದು, ಅದಕ್ಕೆ ಎರಡು ಪಕ್ಷಗಳು ಬದ್ಧವಾಗಿರುತ್ತವೆ. 

-------

vishwakannadigaru.com  ಜಾಲತಾಣವನ್ನು ಬಳಸುವ ನೀವು ಮೇಲೆ ತಿಳಿಸಿರುವ ಎಲ್ಲಾ ನಿಯಮಗಳನ್ನು ಓದಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ ಮತ್ತು ಅದಕ್ಕೆ ಬದ್ಧರಾಗಿರುತ್ತೀರಿ ಎಂದು ಒಪ್ಪಿಕೊಂಡಿರುತ್ತೀರಿ. ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು.